ಬೆಳ್ಮಣ್‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗೃಹ ಸಚಿವ ಪರಮೇಶ್ವರ್‌ ಭೇಟಿ

ಕಾರ್ಕಳ : ಬೆಳ್ಮಣ್‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜು. 8ರಂದು ಬೆಳಗ್ಗೆ ಗೃಹ ಸಚಿವ ಜಿ. ಪರಮೇಶ್ವರ್‌ ಹಾಗೂ ಅವರ ಕುಟುಂಬ ಭೇಟಿ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರು ಪರಮೇಶ್ವರ್ ಕುಟುಂಬವನ್ನು ಸ್ವಾಗತಿಸಿದರು. ದೇವರ ದರ್ಶನ ಪಡೆದ ಅವರು ದೇವಸ್ಥಾನದಲ್ಲಿ ನಡೆದ ಚಂಡಿಕಾ ಹೋಮದಲ್ಲಿ ಭಾಗಿಯಾದರು.

ಸಚಿವ ಪರಮೇಶ್ವರ್ ಅವರ ದೇವಸ್ಥಾನ ಭೇಟಿ ಮೊದಲೇ ನಿಗದಿತ ವೈಯಕ್ತಿಕ ಕಾರ್ಯಕ್ರಮವಾಗಿತ್ತು. ಸಚಿವರು ಕಾರ್ಕಳದಲ್ಲಿದ್ದ ಸಮಯದಲ್ಲಿ ಯಾವುದೇ ರಾಜಕೀಯ ಅಥವಾ ಅಧಿಕೃತ ಸಭೆಗಳಲ್ಲಿ ಭಾಗವಹಿಸಲಿಲ್ಲ.















































































error: Content is protected !!
Scroll to Top