ರಸ್ತೆ ಬದಿ ನಿಂತಿದ್ದ ಮಹಿಳೆಗೆ ಬೈಕ್‌ ಡಿಕ್ಕಿ – ಆಸ್ಪತ್ರೆ ದಾಖಲು

ಕಾರ್ಕಳ : ರಸ್ತೆ ಬದಿ ನಿಂತಿದ್ದ ಮಹಿಳೆಯೋರ್ವರಿಗೆ ಬೈಕ್‌ ಡಿಕ್ಕಿಯಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಜು. 6ರಂದು ಮಿಯ್ಯಾರು ಗ್ರಾಮದಲ್ಲಿ ಸಂಭವಿಸಿದೆ.
ಸುಮನ ಎಂಬವರು ಮಿಯ್ಯಾರು ಮಸೀದಿ ಸಮೀಪ ರಾಷ್ಟ್ರಿಯ ಹೆದ್ದಾರಿ ಬಳಿ ನಿಂತುಕೊಂಡಿದ್ದಾಗ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಸಾಗುತಿದ್ದ KA-20-ET-1548ನೇ ಬೈಕ್‌ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸುಮನ ಅವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಕಾರ್ಕಳ ನರ್ಸಿಂಗ್‌ ಹೋಂಗೆ ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಸುಮನ ಅವರ ಗಂಡ ಜೀತೆಂದ್ರ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































error: Content is protected !!
Scroll to Top