ಹಿಂಜಾವೇ ಮುಖಂಡ ಸಮಿತ್ ರಾಜ್ ದರೆಗುಡ್ಡೆಗೆ 15 ದಿನಗಳ ನ್ಯಾಯಾಂಗ ಬಂಧನ

ಮೂಡುಬಿದಿರೆ : ತನ್ನ ಬಸ್ಸಿಗೆ ಹಾನಿಗೊಳಿಸಿರುವುದಲ್ಲದೆ ತನ್ನಿಂದ 5 ಲಕ್ಷ ರೂ. ಬೇಡಿಕೆ ಮುಂದಿಟ್ಟು ವಸೂಲಿ ನಡೆಸಿದ್ದಾನೆ ಎಂದು ಬಸ್‌ ಮಾಲಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಹಿಂಜಾವೆ ಮುಖಂಡ ಸಮಿತ್ ರಾಜ್ ದರೆಗುಡ್ಡೆಯನ್ನು ಜೂ. 26ರಂದು ಮಧ್ಯಾಹ್ನ ಕಾರ್ಕಳದಲ್ಲಿ ಬಂಧಿಸಿದ್ದಾರೆ.

ಮಿಜಾರು ಬಳಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿರುವವರಿಗೆ ಬಸ್ ಮಾಲಕ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಎಬಿವಿಪಿ, ಬಿಜೆಪಿ ಸಹಿತ ಸಾರ್ವಜನಿಕರು ಪ್ರತಿಭಟಿಸಿದ್ದರು. ಈ ಸಂದರ್ಭ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆಯನ್ನು ಮೂಡುಬಿದಿರೆ ಪೊಲೀಸರು ಗುರುವಾರ ಕಾರ್ಕಳದ ವಾಣಿಜ್ಯ ಸಂಕೀರ್ಣವೊಂದರಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

2024ರ ನವಂಬರ್ 11ರಂದು ಘಟನೆ ನಡೆದಿತ್ತು. ಘಟನೆಯಲ್ಲಿ ಖಾಸಗಿ ಬಸ್ ‘ಮಾಸ್ಟರ್’ ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ಸವಾರರಾದ ಸುಮಿತ್ರಾ ಮತ್ತು ಅವರ ಮಗಳು ಸಾನ್ವಿ ಗಾಯಗೊಂಡಿದ್ದರು. ಬಸ್ಸು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಘಟನೆ ಸಂಭವಿಸಿದೆಂದು ಈ ಸಂದರ್ಭ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದರು. ಆ ಹೋರಾಟದಲ್ಲಿ ಸಮಿತ್ ರಾಜ್ ದರೆಗುಡ್ಡೆಯೂ ಪಾಲ್ಗೊಂಡು ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಸಾಂಘಿಕ ಹೋರಾಟಕ್ಕೆ ಮಣಿದ ಬಸ್ ಮಾಲಿಕ ಘಟನೆ ಸಂಭವಿಸಿದ ಕೆಲವೇ ಗಂಟೆಗೊಳಗಾಗಿ 5 ಲಕ್ಷ ರೂ.ಯನ್ನು ಗಾಯಾಳುಗಳಿಗೆ ಪರಿಹಾರ ನೀಡಿದ್ದರು.
ಆದರೆ ಈ ವಿಚಾರದಲ್ಲಿ ತನಗೆ ಬೆದರಿಕೆ ಹಾಗೂ ವಸೂಲಿಗೆ ಇಳಿದಿದ್ದರು ಎಂದು ಆರೋಪಿಸಿ ಬಸ್ ಮಾಲಕ ಕೇಸು ದಾಖಲಿಸಿದ್ದರು.























































































































error: Content is protected !!
Scroll to Top