ಬೆಂಗಳೂರಿನಲ್ಲಿ ಇಂದು ಆರ್‌ಸಿಬಿ ವಿಕ್ಟರಿ ಪರೇಡ್

ಬೆಂಗಳೂರು : ಐಪಿಎಲ್‌ -2025ರಲ್ಲಿ ಆರ್‌ಸಿಬಿ ಗೆಲುವು ಸಾಧಿಸಿ ತನ್ನ ಹಾಗೂ ಅಭಿಮಾನಿಗಳ 18 ವರ್ಷಗಳ ಕನಸನ್ನು ನನಸಾಗಿದ್ದು, ಇಂದು ಸಂಜೆ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್‌ ನಡೆಯಲಿದೆ.

ಅಧಿಕೃತವಾಗಿ ಆರ್‌ಸಿಬಿ ಈ ವಿಚಾರವನ್ನು ತಿಳಿಸಿದ್ದು ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಯಾಗಲಿದೆ. ಈ ಬಗ್ಗೆ ಶೀಘ್ರವೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ. ಅಲ್ಲದೆ ಅಭಿಮಾನಿಗಳನ್ನು 12ನೇ ಸೇನೆ ಎಂದೇ ಆರ್‌ಸಿಬಿ ಕರೆಯುತ್ತದೆ. ಈ ಕಿರೀಟ ನಿಮಗೆ ಸೇರಿದ್ದು ಎಂದು ತಮ್ಮ ಎಕ್ಸ್‌ ಖಾತೆಯ ಪೋಸ್ಟ್‌ ಹಂಚಿಕೊಂಡಿದ್ದಾರೆ.
ಫೈನಲ್‌ ಪಂದ್ಯ ಗೆದ್ದ ಬಳಿಕ ವಿರಾಟ್‌ ಕೊಹ್ಲಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್‌ ನಡೆಸಲಾಗುವುದು ಎಂದು ತಿಳಿಸಿದ್ದರು.



































































































error: Content is protected !!
Scroll to Top