ಭಾರತ-ಪಾಕ್‌ ಉದ್ವಿಗ್ನತೆ – ಐಪಿಎಲ್ 2025 ಟೂರ್ನಿ ರದ್ದು

ದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರತೀಕಾರ ಸಮರ ನಡೆಯುತ್ತಿದ್ದು, ಯುದ್ಧದ ಭೀತಿ ಹೆಚ್ಚಾಗಿದೆ. ಹೀಗಾಗಿ ಪ್ಲೇ ಆಫ್ಸ್‌ ಸೇರಿ ಇನ್ನೂ 16 ಪಂದ್ಯಗಳು ಬಾಕಿ ಇರುವಾಗಲೇ ಬಿಸಿಸಿಐ 2025ರ ಐಪಿಎಲ್‌ ಟೂರ್ನಿಯನ್ನು ರದ್ದುಗೊಳಿಸಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ.

ಪಂಜಾಬ್​ನ ಧರ್ಮಶಾಲಾದಲ್ಲಿ ಈ ವರ್ಷದ 58ನೇ ಪಂದ್ಯ ನಡೆಯುತ್ತಿತ್ತು. 10.1 ಓವರ್​ಗೆ ಫ್ಲಡ್​ಲೈಟ್ ಸಮಸ್ಯೆ ಆಯಿತು. ಆ ಬಳಿಕ ಭದ್ರತಾ ಕಾರಣದಿಂದ ಮ್ಯಾಚ್​ರದ್ದು ಮಾಡಲಾಯಿತು. ಏಕಾಏಕಿ ಎಲ್ಲರನ್ನೂ ಕಳುಹಿಸಲಾಯಿತು. ಇದು ಮುಂದಿನ ಪಂದ್ಯಗಳ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಅಂತೆಯೇ ಬಿಸಿಸಿಐ ಇಂದು ಮಹತ್ವದ ಸಭೆ ನಡೆಸಿ ಪಂದ್ಯವನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಈ ಹಿಂದೆ 2021ರ ಕೋವಿಡ್‌ ಸಂದರ್ಭದಲ್ಲಿಯೂ ಐಪಿಎಲ್‌ ಟೂರ್ನಿಯನ್ನ ರದ್ದುಗೊಳಿಸಲಾಗಿತ್ತು.



































































































error: Content is protected !!
Scroll to Top