ವಿಬಿಎಸ್ ಟ್ರೋಪಿ : ಓಂ ಕ್ರಿಕೆಟರ್ಸ್ ಕಿನ್ಯಾಪಾದೆ ವಿನ್ನರ್ – ತನುಶ್ರೀ ಮಾರ್ನಾಡ್ ರನ್ನರ್

ಕಾರ್ಕಳ : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ) ಕಾರ್ಕಳ ಇದರ ಆಶ್ರಯದಲ್ಲಿ ಕ್ಷೇಮ ನಿಧಿ ಮತ್ತು ವಿದ್ಯಾನಿಧಿ ಸಹಾಯಾರ್ಥವಾಗಿ ಮಾ. 9ರಂದು ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಉಭಯ ಜಿಲ್ಲಾ ಮಟ್ಟದ ವಿಶ್ವಕರ್ಮ ಸಮಾಜ ಬಾಂಧವರ ವಿಬಿಎಸ್ ಟ್ರೋಫಿ 2025 ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಓಂ ಕ್ರಿಕೆಟರ್ಸ್ ಕಿನ್ಯಾಪಾದೆ ಮತ್ತು ದ್ವಿತೀಯ ಸ್ಥಾನವನ್ನು ತನುಶ್ರೀ ಮಾರ್ನಾಡ್ ತಂಡ ತಮ್ಮದಾಗಿಸಿಕೊಂಡಿತು. ತೃತೀಯ ಪ್ರಶಸ್ತಿಯನ್ನು ರೆಡ್ ಆರ್ಮಿ ಪುತ್ತೂರು ಮತ್ತು ವಿಶ್ವ ಶಕ್ತಿ ಮೂಡುಬಿದ್ರೆ ತಂಡಗಳು ಪಡೆಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೆಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಕಾರ್ಕಳ ಪುರಸಭಾ ಸದಸ್ಯೆ ಮಮತಾ ಪೂಜಾರಿ, ಕರ್ನಾಟಕ ಜ್ಯುವೆಲ್ಲರ್ಸ್‌ನ ಕೆ. ಹರ್ಷವರ್ಧನ್, ಪಿ. ರವಿ ಆಚಾರ್ಯ ಪೆರ್ವಾಜೆ, ಸುರೇಶ ಆಚಾರ್ಯ ನಿಟ್ಟೆ ಉಪಸ್ಥಿತರಿದ್ದರು. ವಿಬಿಎಸ್ ಅಧ್ಯಕ್ಷ ಬಿ. ಪ್ರಕಾಶ್ ಆಚಾರ್ಯ ಸ್ವಾಗತಿಸಿ, ಪಿ. ವಸಂತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಎಂ. ರಮೇಶ್ ಆಚಾರ್ಯ ವಂದಿಸಿದರು

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಬಿಎಸ್ ಅಧ್ಯಕ್ಷ ಬಿ. ಪ್ರಕಾಶ್ ಆಚಾರ್ಯ, ಅತಿಥಿಗಳಾಗಿ ಶಶಿರೇಖಾ ಪ್ರಭಾಕರ ಆಚಾರ್ಯ, ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೆಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಕರುಣಾಕರ ಆಚಾರ್ಯ ಪದ್ಮಗೋಪಾಲ ಸಾಲ್ಮರ, ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ನಳಿನಿ ವಿಜೇಂದ್ರ ಆಚಾರ್ಯ ಕಾರ್ಕಳ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭ ಕ್ರೀಡಾಕೂಟಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು. ಜಯರಾಮ ಆಚಾರ್ಯ ಸ್ವಾಗತಿಸಿ, ಎಂ. ರಮೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಿ ಭಾಸ್ಕರ್ ಆಚಾರ್ಯ ವಂದಿಸಿದರು.



































































































error: Content is protected !!
Scroll to Top