ಸವಾಲುಗಳನ್ನ ಅವಕಾಶವಾಗಿ ಬಳಸಿ : ಸುಯೋಗ್ ಶೆಟ್ಟಿ

ಕಾರ್ಕಳ : ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಸ್ವೀಕರಿಸಿದಾಗ ಗುರಿ ಸಾಧಿಸಲು ಸಾಧ್ಯ ಎಂದು ನಿವಿಯಸ್ ಸೊಲ್ಯೂಷನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಯೋಗ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಮಾ. 8ರಂದು ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ವೃತ್ತಿಜೀವನದ ಬೆಳವಣಿಗೆ, ನಾವೀನ್ಯತೆ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಮತ್ತು ಹೊಂದಾಣಿಕೆಯ ಪ್ರಾಮುಖ್ಯತೆಯ ಕುರಿತಾಗಿ ವಿಚಾರಗಳನ್ನು ಹಂಚಿಕೊಂಡರು.
ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ನಿರ್ದೇಶಕ ಎ. ಯೋಗೀಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಪ್ರಶಸ್ತಿ ಪದಾನ
ಸಂಸ್ಥೆಯ ಹಳೆ ವಿದ್ಯಾರ್ಥಿ, ಉದ್ಯಮಿ ಎನ್. ಸಂಜಿತ್ ಶೆಟ್ಟಿ ಪ್ರಾಯೋಜಿತ ಲೀಡರ್ಸ್‌ ಫೆಲೋಶಿಪ್‌ ಪ್ರಶಸ್ತಿಯನ್ನು ಕೌನ್ಸಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಮಾಜಿ ಮುಖ್ಯಸ್ಥೆ ಪ್ರೊ. ಶಾಲಿನಿ ಕೆ. ಶರ್ಮಾ ಹಾಗೂ ಸಂಜಿತ್ ಶೆಟ್ಟಿ ಫೌಂಡೇಶನ್‌ನ ಸಿಇಒ ವಿವೇಕ್ ವಿಶ್ವನಾಥನ್ ಅವರ ಸಮ್ಮುಖದಲ್ಲಿ ವಿವಿಧ ವಿಭಾಗದ 13 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರಶಸ್ತಿ ವಿಜೇತರ ಪಟ್ಟಿಯನ್ನು ಎಲ್ಯೂಮ್ನೈ ಸೆಲ್‌ನ ಸಂಯೋಜಕ ಡಾ. ಗ್ರೈನಲ್ ಡಿಮೆಲ್ಲೊ ವಾಚಿಸಿದರು. ಇದೇ ಸಂದರ್ಭ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಉನ್ನತ ಸಾಧನೆಗೈದವರಿಗೆ ಬಹುಮಾನ ವಿತರಿಸಲಾಯಿತು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್‌ಕರ್ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಂಶುಪಾಲ ಡಾ.ಐ.ಆರ್ ಮಿತ್ತಂತಾಯ ವಿದ್ಯಾರ್ಥಿ ಸಾಧಕರ ಪಟ್ಟಿಯನ್ನು ವಾಚಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಗಣೇಶ್ ಪೂಜಾರಿ ಕ್ರೀಡಾ ವಿಭಾಗದ ಸಾಧಕರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ ಸ್ವಸ್ತಿ ಶೆಟ್ಟಿ ಅತಿಥಿಯನ್ನು ಸಭೆಗೆ ಪರಿಚಯಿಸಿದರು. ವಿಧಾತ್ರಿ ಪ್ರಾರ್ಥಿಸಿದರು. ಆಂಡ್ರ್ಯೂ ಡಿ ಅಲ್ಮೆಡಾ ಮತ್ತು ಕುಷಿ ಮಲ್ಲಿ ಕಾರ್ಯಕ್ರಮ ನಿರೂಪಿಸಿ, ಕಾರ್ಯಕ್ರಮ ಸಂಯೋಜಕ ಡಾ. ನರಸಿಂಹ ಬೈಲ್ಕೇರಿ ವಂದಿಸಿದರು.



































































































error: Content is protected !!
Scroll to Top