ಜೇಸಿಐ ಕಾರ್ಕಳ – ಲೇಡಿ ಜೇಸಿ ವಿಂಗ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಕಾರ್ಕಳ : ಜೇಸಿಐ ಕಾರ್ಕಳ ಹಾಗೂ ಲೇಡಿ ಜೇಸಿ ವಿಂಗ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ, ಮಾನಸಿಕ ಒತ್ತಡ ನಿವಾರಣ ಚಟುವಟಿಕೆ, ಮಹಿಳಾ ಹಕ್ಕುಗಳು ಸಮಾನತೆ ಮತ್ತು ಸಬಲೀಕರಣದ ಬಗ್ಗೆ ತರಬೇತಿ, ಮಹಿಳೆಯರ ರ‍್ಯಾಲಿ, ಸಾಧಕ ಮಹಿಳೆಗೆ ಸನ್ಮಾನ, ಹಾಗೂ ಇನ್ನಿತರ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ರಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕರಾಟೆ ತರಬೇತಿದಾರ ಸತೀಶ್ ಬೆಳ್ಮಣ್ ಮಕ್ಕಳಿಗೆ ಕರಾಟೆ ಪ್ರಾತ್ಯಕ್ಷಿ ನಡೆಸಿಕೊಟ್ಟರು.

ನ್ಯಾಯವಾದಿ ಸುರೇಶ್ ಪೂಜಾರಿ ಮಹಿಳಾ ಹಕ್ಕುಗಳು ಸಮಾನತೆ ಮತ್ತು ಸಬಲೀಕರಣದ ಕುರಿತು, ಸುಜಾತಾ ರಾಮಚಂದ್ರ ಮಾನಸಿಕ ಒತ್ತಡ ನಿವಾರಣ ಚಟುವಟಿಕೆ ನಡೆಸಿಕೊಟ್ಟರು.

ಸನ್ಮಾನ
ಎರಡೂ ಕೈಗಳನ್ನು ಕಳೆದುಕೊಂಡಿರುವ ಸಾಧಕಿ, ಬ್ಯಾಂಕ್ ಉದ್ಯೋಗಿ ಮಾಲಿನಿ ಭಂಡಾರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್, ಕಾರ್ಯದರ್ಶಿ ಸುಷ್ಮಿತಾ ರಾವ್, ಲೇಡಿ ಜೇಸಿ ನಿರ್ದೇಶಕಿ ಶಾಹಿನ್ ರಿಜ್ವಾನ್ ಖಾನ್, ಜೂನಿಯರ್ ಜೆಸಿ ಸಂಯೋಜಕಿ ಸುಜಾತಾ ರಾಮಚಂದ್ರ, ಪೂರ್ವ ಅಧ್ಯಕ್ಷೆ ದಿವ್ಯಸ್ಮಿತಾ ಭಟ್, ಶಗುಫ್ತಾ ಖಾನ್, ಸದಸ್ಯರಾದ ಪ್ರಿಯಾ ನವಿನ್ ಲೋಬೊ, ಮಂಜುಳಾ ದಿನೇಶ್, ಶಿಲ್ಪಾ ಸುದರ್ಶನ್ ಮೊದಲಾದವರು ಈ ಸಂದರ್ಭದಲ್ಲಿದ್ದರು.

















































error: Content is protected !!
Scroll to Top