ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ ತಳಭಾಗದಲ್ಲಿ ಬೆಂಕಿ

ಕಾರ್ಕಳ : ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ನ ತಳಭಾಗದಲ್ಲಿ ಮುಖ್ಯ ರಸ್ತೆಯ ಸಮೀಪದಲ್ಲಿ ವಿದ್ಯುತ್‌ ಕಂಬಕ್ಕೆ ತೆಂಗಿನ ಮರ ವಾಲಿದ ಪರಿಣಾಮವಾಗಿ ಶಾಕ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮವಾಗಿ ಗಿಡ ಗಂಟಿಗಳಿಗೆ ಬೆಂಕಿ ಹರಡಿ ಸುತ್ತ ಮುತ್ತಲಿನ ಒಣಹುಲ್ಲುಗಳಿಗೆ ಬೆಂಕಿ ಆವರಿಸಿದೆ. ತಕ್ಷಣವೇ ಸ್ಥಳೀಯರು ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ರೂಪೇಶ್, ಚಾಲಕ ಸಂಜಯ್, ಮುಝಾಂಬಿಲ್ ಮತ್ತು ಭೀಮಪ್ಪ ಪಾಲ್ಗೊಂಡಿದ್ದಾರೆ.



































































































error: Content is protected !!
Scroll to Top