ಕಾರ್ಕಳ : ಟೆಂಪೋ ಡಿಕ್ಕಿ – ಕುರಿ ಸ್ಥಳದಲ್ಲೇ ಸಾವು

ಕಾರ್ಕಳ : ಟೆಂಪೋ ಡಿಕ್ಕಿಯಾಗಿ ಕುರಿಯೊಂದು ಸ್ಥಳದಲ್ಲೇ ಸಾವನಪ್ಪಿದ ಘಟನೆ ಫೆ. 10ರಂದು ಕುಕ್ಕುಂದೂರು ಗ್ರಾಮದಲ್ಲಿ ಸಂಭವಿಸಿದೆ. ರಜಾಕ್ ಎಂಬುವವರು ಸಂಜೆ 5:45 ಗಂಟೆಗೆ ಕೆ.ಎಂ.ಇ.ಎಸ್‌. ಶಾಲೆ ಬಳಿಯ ಅಂಗಡಿಯಿಂದ ಕಟ್ಟಿದ ಕುರಿಯನ್ನು ಬಿಚ್ಚಿಕೊಂಡು ರಸ್ತೆಯ ಬದಿಯಲ್ಲಿ ಹಿಡಿದುಕೊಂದು ಹೋಗುತ್ತಿರುವಾಗ ಪುಲ್ಕೆರಿ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ ಸಾಗುತ್ತಿದ್ದ ಟೆಂಪೋ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕುರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.

























































































































error: Content is protected !!
Scroll to Top