ಮರಳು ಅಕ್ರಮ ಸಾಗಾಟ – ಬೆನ್ನತ್ತಿದ ಪೊಲೀಸ್‌ ವಾಹನಕ್ಕೆ ಅಡ್ಡಗಟ್ಟಿದ ವ್ಯಕ್ತಿಯ ಬಂಧನ

ಕಾರ್ಕಳ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬೆನ್ನತ್ತಿದ ಪೊಲೀಸ್‌ ವಾಹನಕ್ಕೆ ಅಡ್ಡಗಟ್ಟಿದ ಆರೋಪಿಯನ್ನು ಕಾರು ಸಹಿತ ಪೊಲೀಸರು ಬಂಧಿಸಿದ್ದಾರೆ. ಕುಕ್ಕುಂದೂರು ಗ್ರಾಮದ ಸೈಯದ್‌ ಸೈಫ್‌ ಬಂಧಿತ ಆರೋಪಿ
ಜ. 3ರಂದು ಬೆಳಿಗ್ಗೆ 11:20 ಗಂಟೆಗೆ ಕಾರ್ಕಳ ನಗರ ಠಾಣೆ ಪೊಲೀಸ್‌ ಉಪನಿರೀಕ್ಷಕ ಸಂದೀಪ್‌ ಕುಮಾರ್‌ ಶೆಟ್ಟಿ ಸಿಬ್ಬಂದಿಯೊಂದಿಗೆ ಕುಕ್ಕುಂದೂರು ಗ್ರಾಮದ ಸರ್ವಜ್ಜ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಒಂದನೇ ಆರೋಪಿ ಕೆಎ.19 ಡಿ.9245ನೇ ನಂಬ್ರದ ಟಿಪ್ಪರ್‌ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದ ವೇಳೆ ಬೆನ್ನತ್ತಿಕೊಂಡು ಬಂದ ಪೊಲೀಸ್‌ ವಾಹನವನ್ನು 2ನೇ ಆರೋಪಿ ಸೈಯದ್‌ ಸೈಫ್‌ ಕೆಎ19ಎಮ್‌‌ಬಿ.7472ನೇ ನಂಬ್ರದ ರಿಡ್ಜ್‌ ಕಾರನ್ನು ಚಲಾಯಿಸಿಕೊಂಡು ಬಂದು ಪೊಲೀಸ್‌ ವಾಹನಕ್ಕೆ ಅಡ್ಡಗಟ್ಟಿದ್ದನು. ಆತನನ್ನು ಜ. 14ರಂದು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಮತ್ತೊಂದು ದೂರು ದಾಖಲು
ಪೊಲೀಸ್‌ ಕರ್ತವ್ಯಕ್ಕೆ ತಡೆಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೈಯದ್‌ ಸೈಫ್‌ನನ್ನು ದಸ್ತಗಿರಿ ಮಾಡಿದ ಸಂದರ್ಭ ಆತ ಅಮಲು ಪದಾರ್ಥ ಸೇವಿಸಿದಂತೆ ವರ್ತಿಸುತ್ತಿದ್ದು, ಅನುಮಾನಗೊಂಡ ಪೊಲೀಸರು ಈತನನ್ನು ಜ. 14ರಂದು ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವೈದ್ಯಕೀಯ ವರದಿಯಲ್ಲಿ ಈತನು ಮಾದಕ ಹಾಗೂ ಮನೋದ್ರೇಕಕಾರಿ ವಸ್ತು ಗಾಂಜಾದ ಉತ್ಪನ್ನವಾದ ಟೆಟ್ರಾ ಹೈಡ್ರೋ ಕ್ಯಾನ್ ಬಿಲ್ ಪದಾರ್ಥ ಸೇವಿಸಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































































































error: Content is protected !!
Scroll to Top