ಕಾರ್ಕಳ : ಉಡುಪಿ – ಕಾರ್ಕಳ ಹೆದ್ದಾರಿಯ ಬೈಲೂರಿನಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಸವಾರರು ಗಾಯಗೊಂಡಿರುವ ಘಟನೆ ಸೆ. 6ರಂದು ಸಂಭವಿಸಿದೆ. ಬೈಕ್ ಸವಾರರನ್ನು ಕಲ್ಲು ಕೋರೆಯಲ್ಲಿ ಕೆಲಸ ಮಾಡುವ ಜಾರ್ಕಳದ ಸೂರ್ಯ (20) ಪ್ರಜ್ವಲ್ (16) ಎಂದು ಗುರುತಿಸಲಾಗಿದೆ. ಬೈಲೂರು ಹೋಲೋಬ್ಲಾಕ್ ಘಟಕದ ಸಮೀಪ ಟಿಪ್ಪರ್ ಬ್ರಹ್ಮಲಿಂಗೇಶ್ವರ ದೇವಸ್ಥಾನದತ್ತ ಸಾಗುವ ಮಾರ್ಗಕ್ಕೆ ತಿರುಗಿದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಗಾಯಾಳನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬೈಲೂರು : ಟಿಪ್ಪರ್‌ಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರಿಗೆ ಗಂಭೀರ ಗಾಯ



















