ಕಾರ್ಕಳ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹರ್ದ ಕೋ-ಅಪರೇಟಿವ್ ಸೊಸೈಟಿ ಲಿ. ಇದರ ಮೂಡುಬೆಳ್ಳೆ ಶಾಖೆಯ ವತಿಯಿಂದ ಆ. 29 ರಂದು 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹೊಸಬೆಳಕು ಆಶ್ರಮದಲ್ಲಿ 185 ಬೆಡ್‌ಶೀಟ್ ಮತ್ತು ಸಿಹಿ ತಿಂಡಿ ವಿತರಣೆ ಮಾಡಲಾಯಿತು. ಈ ಸಂಧರ್ಭ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು, ಗ್ರಾಮ ಪಂಚಾಯತ್ ಸದಸ್ಯ ಸುನಿಲ್ ಎ. ಕೋಟ್ಯನ್, ಹೊಸಬೆಳಕು ಆಶ್ರಮದ ಸಂಸ್ಥಾಪಕಿ ತನುಲಾ ತರುಣ್, ಮೂಡುಬೆಳ್ಳೆ ಶಾಖೆಯ ವ್ಯವಸ್ಥಾಪಕಿ ಪ್ರೀತಿ ಚಿಪ್ಕರ್ ಹಾಗೂ ಸಹಾಯಕ ವ್ಯವಸ್ಥಾಪಕಿ ಪ್ರೀಮಾ ಮೋನಿಸ್, ಮಿಲಾಗ್ರಿಸ್ ಸಂಸ್ಥೆಯ ಉಡುಪಿ ವಿಭಾಗದ ಮಾರಾಟ ಅಧಿಕಾರಿ ಗೌತಮ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಖೆಯ ಸಿಬ್ಬಂದಿ ಸ್ನೇಹಾ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಸೈಂಟ್ ಮಿಲಾಗ್ರಿಸ್ ಸೊಸೈಟಿ ವತಿಯಿಂದ ಹೊಸಬೆಳಕು ಆಶ್ರಮಕ್ಕೆ ಬೆಡ್‌ಶೀಟ್ ಕೊಡುಗೆ




















