ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ : ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆ

ಕಾರ್ಕಳ : ಕಲ್ಯಾ ಸರಕಾರಿ ಪ್ರೌಢ ಶಾಲೆಯಲ್ಲಿ ನೂರು ಪ್ರತಿಶತ ಫಲಿತಾಂಶ ದಾಖಲಿಸಿದ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ NMMS ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಾರ್ಷಿಕ ರೂ. 12,000 ಸಾವಿರ ಶಿಷ್ಯ ವೇತನಕ್ಕೆ ಭಾಜನರಾದ ಏಳು ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ 12 ವರ್ಷ ಮುಖ್ಯ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಸುಮನ ಅವರ ಬೀಳ್ಕೊಡುಗೆ ಸಮಾರಂಭವು ಜರುಗಿತು.

ಶಾಸಕ ವಿ. ಸುನಿಲ್ ಕುಮಾರ್ ಇವರ ಘನ ಉಪಸ್ಥಿತಿಯಲ್ಲಿ ಈ ಸಮಾರಂಭವು ಜರುಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಸಿಪ್ರಿಯಾನ್ ಮೊಂತೇರೋ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಕೆನರಾ ಬ್ಯಾಂಕಿನ ಸಿಎಸ್‌ಆರ್ ನಿಧಿಯಿಂದ ಮಾಡಿದ ಶಾಲಾ ಪ್ರಾಂಗಣದ ಇಂಟರ್ಲಾಕ್ ಕಾರ್ತಿಕಾ ಉದ್ಘಾಟಿಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಜನರಲ್ ಮ್ಯಾನೇಜರ್ ಶಶಿಧರ ರಾವ್ ಉದ್ಘಾಟಿಸಿದರು. ಬೋಳಾಸ್ ಕ್ಯಾಶ್ಯೂ ಫ್ಯಾಕ್ಟರಿ, ಕೆದಿಂಜೆಯ ಮಾಲಕರಾದ ದಾಮೋದರ ಕಾಮತ್ ಅವರು ಶಾಲಾ ಮಕ್ಕಳಿಗೆ ನೀಡಿದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸುಧಾಕರ ಆಚಾರ್ಯ ಹಾಗೂ ಶ್ರೀಮತಿ ಶಾಲಿನಿ ಬಿ.ಎಸ್ ಇವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 14 ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂಜಾ, ಉಪಾಧ್ಯಕ್ಷ ಹರಿಜೀವನ್ ಶೆಟ್ಟಿ, ಸದಸ್ಯರಾದ ಸಂಜೀವ ಶೆಟ್ಟಿ, ಪ್ರೇಮಾ, ಜಗದೀಶ ಆಚಾರ್ಯ, ಸುಪ್ರಿಯಾ ಕೋಟ್ಯಾನ್ ಅತಿಥಿಗಳಾಗಿ ಭಾಗಿಯಾಗಿದ್ದರು. ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲ ಅಶೋಕ್ ಕಾಮತ್, ಉಪನ್ಯಾಸಕ ಸುಬ್ರಹ್ಮಣ್ಯ ಭಟ್, ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಕೆ.ವಿ.ಜಿ. ಬ್ಯಾಂಕಿನ ನಿವೃತ್ತ ರೀಜನಲ್ ಮ್ಯಾನೇಜರ್ ಜಗದೀಶ್ ರಾವ್, ನಿಟ್ಟೆ ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್ ಯೋಗೀಶ್ ಹೆಗ್ಡೆ, ಕಾರ್ಕಳ ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ವೇದಿಕೆಯಲ್ಲಿದ್ದರು.

ಮುಖ್ಯ ಶಿಕ್ಷಕ ರಾಮ ಮೊಗೇರ್ ಸ್ವಾಗತಿಸಿ, ಪ್ರಸಾದಿನಿ ಹಾಗೂ ಗಣೇಶ್ ನಿರೂಪಿಸಿ, ಚಂದ್ರಶೇಖರ್ ವಂದಿಸಿದರು.































































































error: Content is protected !!
Scroll to Top