ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

ಕಾರ್ಕಳ : ಕರ್ನಾಟಕ ಯುವಜನ ಕ್ರೀಡಾ ಸಂಸ್ಥೆ, ಎಸ್‌.ಜಿ.ಎಸ್‌ ಅಂತರಾಷ್ಟ್ರೀಯ ಯೋಗ ಪ್ರತಿಷ್ಠಾನ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ಕರ್ನಾಟಕ ಸರಕಾರ ಹಾಗೂ ನೆಹರು ಯುವ ಕೇಂದ್ರ ಭಾರತ ಸರಕಾರ, ಯೋಗಾಸನ ಭಾರತ್‌ ಸಹಕಾರದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯಕ್ತ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರಾಜ್ಯಮಟ್ಟದ ಸಾಂಪ್ರದಾಯಿಕ ಯೋಗಾಸನ ಮತ್ತು ನಮ್ಮ ಆಯ್ಕೆಯ ಆಸನ ಎರಡು ವಿಭಾಗದಲ್ಲಿ ಬೆಳ್ಮಣ್ಣಿನ ಉದ್ಭವ್‌ ಜಿ. ದೇವಾಡಿಗ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳದ ಯೋಗ ಪಟುಗಳಾದ ಪ್ರವೀಣ್ ಕೋಟ್ಯಾನ್ ಮತ್ತು ನಿತ್ಯಾನಂದ ಆಚಾರ್ಯ ಇವರು ಪ್ರಥಮ ಮತ್ತು ತೃತೀಯ ಸ್ಥಾನಗಳಿಸಿ ಅಂತರ್ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ





















































error: Content is protected !!
Scroll to Top