ಕಾರ್ಕಳ : ಟವರ್‌ನಲ್ಲಿ ಅಳವಡಿಸಿದ್ದ ಏರ್ಟೆಲ್ ಕಂಪೆನಿ ಮಾಲಿಕತ್ವದ ಎರಿಕ್ಸನ್ ಕಂಪೆನಿಯ ಬಿಡಿಭಾಗವಾದ 1,83,600 ರೂ. ಮೌಲ್ಯದ BBU ವನ್ನು ಕಳವುಗೈದ ಘಟನೆ ಏ. 9ರಂದು ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಕಾಬೆಟ್ಟು ಶೀತಲ್ ಬಾರ್ ಹಿಂಭಾಗದಲ್ಲಿ ಟವರ್ ವಿಷನ್ ಕಂಪೆನಿಯಿಂದ ಫೆಬ್ರವರಿ ತಿಂಗಳಿನಲ್ಲಿ ನಿರ್ಮಿಸಿದ್ದ ಟವರ್‌ನಲ್ಲಿ ನೆಟ್ವರ್ಕ್ ಸ್ಥಗಿತವಾಗಿರುವ ಹಿನ್ನೆಲೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿರುತ್ತದೆ. ಏ. 9ರ ಮಧ್ಯಾಹ್ನ 1:30 ರಿಂದ 1:49 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎನ್ನಲಾಗುತ್ತಿದೆ. ಟವರ್ ವಿಷನ್ ಕಂಪೆನಿಯ ಕ್ಲಸ್ಟರ್ ಇನ್ಚಾರ್ಜ್ ಯೋಗೀಶ ಪಿ. ನೀಡಿದ ದೂರಿತೆ ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಟವರ್‌ನಲ್ಲಿ ಅಳವಡಿಸಿದ್ದ 1,83,600 ರೂ. ಮೌಲ್ಯದ ಸ್ವತ್ತು ಕಳವು





































