ಬೆಳ್ಳಾರೆಯಲ್ಲಿ ಎನ್‌ಐಎ ಶೋಧ?

ಮಂಗಳೂರು : ಉಗ್ರ ಚಟುವಟಿಕೆಗಳನ್ನು ದಮನಿಸುವ ನಿಟ್ಟಿನಲ್ಲಿ ರಾಜ್ಯದ ಹಲವೆಡೆ ಇಂದು ಮುಂಜಾನೆಯಿಂದಲೇ ಎನ್‌ಐಎ ದಾಳಿ ನಡೆದಿದೆ. ಕಡಬ ತಾಲೂಕಿನ ಬೆಳ್ಳಾರೆಯಲ್ಲೂ ಮನೆಯೊಂದಕ್ಕೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಸಂಬಂಧಪಟ್ಟವರು ಈ ಕುರಿತು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ಪರಪ್ಪನ ಅಗ್ರಹಾರದಲ್ಲಿರುವ ಕೆಲವು ಉಗ್ರರು ಜೈಲಿನಲ್ಲಿದ್ದುಕೊಂಡೇ ಹೊರಗಿನ ಉಗ್ರರ ಜತೆ ಸಂಪರ್ಕ ಸಾಧಿಸಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿರುವ ಖಚಿತ ಸುಳಿವಿನ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಎನ್‌ಐಎ ಇಂದು ಮುಂಜಾನೆಯಿಂದಲೇ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಮೂರು ಸಮೀಪದ ಕುಲಾಯಿತೋಡು ಎಂಬಲ್ಲಿರುವ ಮನೆಯೊಂದರಲ್ಲಿ ಪರಿಶೀಲನೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯ ಎದುರು ಕಾರೊಂದು ನಿಂತುಕೊಂಡಿರುವ ಫೋಟೊಗಳನ್ನು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಎನ್‌ಐಎ ಅಧಿಕಾರಿಗಳದ್ದೇ ಕಾರು ಎನ್ನುವುದು ದೃಢವಾಗಿಲ್ಲ.

ಬೆಂಗಳೂರು ಸ್ಫೋಟದ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳ ಒಂದು ತಂಡ ನಿನ್ನೆ ರಾತ್ರಿ 8 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಳಗಿನ ಜಾವ 6 ಗಂಟೆವರೆಗೆ ತನಿಖೆ ನಡೆಸಿದ್ದು, ಉಗ್ರ ನಜೀರ್ ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದಾರೆ.































































































error: Content is protected !!
Scroll to Top