ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ರಾಜೀನಾಮೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಬೆಂಗಳೂರಿನ ವಿಧಾನಸೌಧದ ಒಳಗೆ ‘ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕಾಗಿ ರಾಹುಲ್ ಅವರ ಆಪ್ತರನ್ನು ಬೆಂಗಳೂರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಈ ರಾಷ್ಟ್ರ ವಿರೋಧಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಯುಎಪಿಎ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದೆ. ರಾಜೀನಾಮೆ ನೀಡಲು ಕಾಂಗ್ರೆಸ್ ಸಂಸದ ನಸೀರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಬೇಕು ಎಂದು ಆಗ್ರಹಿಸಿದೆ. ಪಾಕಿಸ್ಥಾನದ ಡಿಎನ್‌ಎಯನ್ನು ಹಂಚಿಕೊಳ್ಳುವ ಕಾಂಗ್ರೆಸ್ ತನ್ನ ನಿಷ್ಠೆ ಎಲ್ಲಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ ಎಂದು ವ್ಯಂಗ್ಯವಾಡಿದೆ.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಅಯೋಗ್ಯ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮದು ನಾಲಿಗೆಯೋ ಅಥವಾ ಬೇರೆ ಏನಾ? ಖಾಸಗಿಯಾಗಿ ಮಿನಿಸ್ಟರ್‌ ಎರಡೆರಡು ಬಾರಿ ತನಿಖೆ ಮಾಡಿಸಿ ವರದಿ ತರಿಸಿಕೊಳ್ಳಬಹುದು. ಎಫ್‌ಎಸ್‌ಎಲ್‌ ವರದಿಗೂ ಮುನ್ನವೇ ಕ್ಲೀನ್‌ಚಿಟ್‌ ಕೊಡಬಹುದು. ‘ನಾನು ಹೇಳಿದಂಗೆ ಎಫ್‌ಎಸ್‌ಎಲ್‌ ವರದಿ ಬರುತ್ತೆ’ ಅಂತಾನೂ ಖರ್ಗೆ ಒದರಬಹುದು. ಆದರೆ ಖಾಸಗಿಯಾಗಿ ಯಾರೂ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬಾರದು, ಹೇಳಬಾರದು ಎಂಬುದು ಯಾವ ತುಘಲಕ್‌ ಧೋರಣೆ?

ಈ ಅಯೋಗ್ಯ ಐಟಿ ಸಚಿವರಾಗಿರುವುದರಿಂದ ಕಾಂಗ್ರೆಸ್‌ನ ಐಟಿ ಸೆಲ್‌ ಸುಳ್ಳು ಸುದ್ದಿಗಳನ್ನು ರಾಜ್ಯದಲ್ಲಿ ಹರಡುತ್ತಿದೆ. ಘಟನೆ ನಡೆದು ವಾರ ಕಳೆದರೂ ನಿಜ ತಿಳಿಸದೆ ಸತ್ಯ ಮರೆಮಾಚಲು ಯತ್ನಿಸುತ್ತಿದೆ ಎಂಬುದನ್ನು “ಪ್ರಿಯಾಂಕ್‌ ಖರ್ಗೆಯವರ ನಡುಗುವ ಕೈಗಳೇ” ತಿಳಿಸುತ್ತಿವೆ. ಖರ್ಗೆಯವರೇ, ನೀವು ಹೇಳಿದ್ದೇ ಸತ್ಯ ಎಂದು ಕಿವಿ ಮೇಲೆ ಹೂ ಇಟ್ಟುಕೊಳ್ಳಲು ನಿಮ್ಮಷ್ಟು ಶತಮೂರ್ಖರು ಯಾರೂ ಇಲ್ಲ ಎಂದು ಹೇಳಿದೆ.

ಎಫ್‌ಎಸ್‌ಎಲ್‌ ವರದಿಯ ಅಸಲಿಯತ್ತು ಪಾ’ಕೈ’ಸ್ತಾನ್ ಜಿಂದಾಬಾದ್ ಎಂದವರು ಅರೆಸ್ಟ್. ಪಾಕಿಸ್ಥಾನ್ ಜಿಂದಾಬಾದ್ ಎಂದಿರುವುದು ದೃಢವಾಗುತ್ತಿದ್ದಂತೆ ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ, ಅಯೋಗ್ಯ ಕಾಂಗ್ರೆಸ್ ಮಾತ್ರ ನಾಸೀರ್ ಸಾಬ್ ಜಿಂದಾಬಾದ್ ಎನ್ನುತ್ತಿದೆ. ಮಜಾವಾದಿ ಸಿದ್ದರಾಮಯ್ಯ ಸರ್ಕಾರ ಪಾಕೈಸ್ತಾನ್ ಎಂದ ಬ್ರದರ್ಸ್‌ಗಳ ಬೆನ್ನಿಗೆ ನಿಂತು ದೇಶ ದ್ರೋಹಿ ಕೃತ್ಯ ಎಸಗುತ್ತಿದೆ. ಸಿದ್ದರಾಮಯ್ಯನವರೇ ನೀವು ನಮ್ಮ ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದೆ.































































































error: Content is protected !!
Scroll to Top