ಮೈಸೂರು ಮಹಾರಾಜರಿಗೆ ಆನೆಗುಂದಿ ಮಹಾ ಸಂಸ್ಥಾನದ ವತಿಯಿಂದ ಗೌರವಾರ್ಪಣೆ

ಕಾರ್ಕಳ : ಆನೆಗುಂದಿ ಮಹಾ ಸಂಸ್ಥಾನದ ವತಿಯಿಂದ ಮೈಸೂರು ಮಹಾರಾಜ ಶ್ರೀ ಯದುವೀರದತ್ತ ಜಯ ಚಾಮರಾಜೇಂದ್ರ ಒಡೆಯರ್ ಅವರಿಗೆ ಫೆ. 26ರಂದು ಗೌರವಾರ್ಪಣೆ ಸಲ್ಲಿಸಲಾಯಿತು.
ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ್ ಹೋಬಳಿ, ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ್ ಹಳೆಯಂಗಡಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ವಿಶ್ವಸ್ತರಾದ ಕೆ. ಹರೀಶ್ ಆಚಾರ್ಯ ಕಾರ್ಕಳ ಅವರನ್ನೊಳಗೊಂಡ ನಿಯೋಗ ಒಡೆಯರ್ ಅವರನ್ನು ಸಸಿಹಿತ್ತಲು ವಿಶ್ರಾಂತಿ ಧಾಮದಲ್ಲಿ ಭೇಟಿ ಮಾಡಿ ಆನೆಗುಂದಿ ಮಹಾ ಸಂಸ್ಥಾನದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭ ವಿಜಯನಗರ ಸಾಮ್ರಾಜ್ಯದ ಬಳಿಕ ಆನೆಗುಂದಿ ಹೋತನ ಕಟ್ಟೆ-ಬೆಳಗುತ್ತಿ ಮಠ ಗುರು ಪರಂಪರೆಗೆ ಮೈಸೂರು ರಾಜರು ಅಂದು ರಾಜಾಶ್ರಯ ನೀಡಿ ಧರ್ಮ ಜಾಗೃತಿಗೆ ರಾಜಾನುಮತಿ ನೀಡಿದ್ದರ ಬಗ್ಗೆ ಮಹಾರಾಜರೊಂದಿಗೆ ವಿಚಾರ ವಿನಿಮಯ ನಡೆಸಲಾಯಿತು. ಮಹಾಸಂಸ್ಥಾನದ ವೇದ ಪಾಠಶಾಲೆ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಹಾರಾಜರು ಮುಂದಿನ ದಿನಗಳಲ್ಲಿ ಮಹಾಸಂಸ್ಥಾನಕ್ಕೆ ಭೇಟಿ ನೀಡುವ ಭರವಸೆ ನೀಡಿದರು.



















































































error: Content is protected !!
Scroll to Top