ಮಾ. 1 : ಗ್ರಾಮ ಪಂಚಾತಯತ್‌ ನೌಕರರ ಪ್ರತಿಭಟನೆ

ಬೆಂಗಳೂರು : ಗ್ರಾಮ ಪಂಚಾಯತ್ ನೌಕರರು ತಮಗಾಗುತ್ತಿರುವ ಸಮಸ್ಯೆಗಳ ವಿರುದ್ಧ ಮಾ. 1ರಿಂದ ಸಾರ್ವಜನಿಕ ಸೇವೆಗಳಿಗೆ ಯಾವುದೇ ರೀತಿಯಲ್ಲಿ ವ್ಯತ್ಯಯವಾಗದಂತೆ ಕಚೇರಿಯಲ್ಲಿ ಕಪ್ಪು ಬಟ್ಟೆ/ಪಟ್ಟಿ ಧರಿಸಿ ಇಲಾಖೆಯಿಂದ ಬೇಡಿಕೆ ಈಡೇರುವವರೆಗೂ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಳ ಅವರು ತಿಳಿಸಿದ್ದಾರೆ.

ರಾಜ್ಯದ ಗ್ರಾ. ಪಂ. ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸಂಘಟನೆಯ ಮೂಲಕ ಹಲವಾರು ಬೇಡಿಕೆಗಳನ್ನು ಇಲಾಖೆಗೆ ಮಂಡಿಸುತ್ತಾ ಬಂದಿದ್ದಾರೆ. ಆದರೆ ಇಲಾಖೆ ಪಂಚಾಯತ್ ನೌಕರರ ಮೂಲ ಬೇಡಿಕೆಗಳಾದ ಕನಿಷ್ಠ ವೇತನ ಬದಲು ವೇತನ ಶ್ರೇಣಿ, ಅನುಮೋದನೆ ಆಗದೆ ಇರುವ ನೌಕರರಿಗೆ ಜಿಲ್ಲಾ ಪಂಚಾಯತ್ ಅನುಮೋದನೆ, ಜೇಷ್ಠತಾ ಪಟ್ಟಿಯಲಿರುವ ನೌಕರರಿಗೆ ಸಕಾಲದಲ್ಲಿ ಮುಂಭಡ್ತಿ ಹಾಗೂ ನಿವೃತ್ತಿಯಲ್ಲಿ ಆರ್ಥಿಕ ಭದ್ರತೆಗಳನ್ನು ಈಡೇರಿಸದೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಬೇಡಿಕೆಗಳು
ಗ್ರಾ. ಪಂ. ನೌಕರರಿಗೆ ಕನಿಷ್ಠ ವೇತನ ಬದಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಡಿ ‘ಸಿ’ ಮತ್ತು ‘ಡಿ’ ದರ್ಜೆಯ ವೇತನ ಶ್ರೇಣಿ ನಿಗದಿಪಡಿಸಬೇಕು. ನೌಕರರಿಗೆ ಆರೋಗ್ಯ ಭದ್ರತೆ ಒದಗಿಸಬೇಕು. ನಿವೃತ್ತಿಯಾದಾಗ ಮಾಸಿಕ ನಿವೃತ್ತಿ ಉಪಧನ ಮಂಜೂರು ಮಾಡಬೇಕು. ಜಿ.ಪಂ. ಅನುಮೋದನೆಯಾಗದೆ ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಗ್ರಾ.ಪಂ. ನೌಕರರಿಗೆ ಜಿ.ಪಂ. ಅನುಮೋದನೆ ಒದಗಿಸಬೇಕು. ಜಿ.ಪಂ. ಜೇಷ್ಠತಾ ಪಟ್ಟಿಯಲ್ಲಿರುವ ಎಲ್ಲರಿಗೂ ಗ್ರಾ.ಪಂ. ನೌಕರ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಮುಂಭಡ್ತಿ ನೀಡಬೇಕು ಎಂದು ದೇವಿಪ್ರಸಾದ್ ಅವರು ಆಗ್ರಹಿಸಿದ್ದಾರೆ.



















































































error: Content is protected !!
Scroll to Top