ಡಿ. 31 : ಕ್ಷತ್ರಿಯ ಮರಾಠ ಸಮಾಜದ ಕ್ರೀಡಾಕೂಟ

ಕಾರ್ಕಳ : ಕ್ಷತ್ರಿಯ ಮರಾಠ ಸಮಾಜದ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಮತ್ತು ಸಮಾಜ ಬಂಧುಗಳ ಕ್ರೀಡಾ ಆಸಕ್ತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಕಾರ್ಕಳ, ಮೂಡುಬಿದಿರೆ, ಮುಲ್ಕಿ ವಲಯ ಮಟ್ಟದ ಸಮಾಜ ಬಂಧುಗಳ ಕ್ರೀಡಾಕೂಟವನ್ನು ಡಿಸೆಂಬರ್ 31ರಂದು ಬೆಳಿಗ್ಗೆ 9.30ರಿಂದ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಲಾಗಿದೆ.

ಸಮಾಜದ ಎಲ್ಲ ಬಂಧುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ LKGಯಿಂದ 50 ವರ್ಷ ಮೇಲ್ಪಟ್ಟವರಿಗೆ ವಿವಿಧ 8 ವಿಭಾಗದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತೇಕವಾದ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು, ಪದಕ ಹಾಗೂ ಪ್ರಶಸ್ತಿ ಪತ್ರ ಮತ್ತು ಪ್ರತಿ ವಿಭಾಗದಲ್ಲಿ ಚಾಂಪಿಯನ್‌ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಉದ್ಘಾಟನೆ ಆಕರ್ಷಕ ಪಥ ಸಂಚಲನದೊಂದಿಗೆ ನಡೆಯಲಿದ್ದು ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಹಿಡಿಯಲಿರುವರ ಕ್ರೀಡಾ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಕಾರ್ಕಳ ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅದ್ಯಕ್ಷ ಶುಭದ ರಾವ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.































































































error: Content is protected !!
Scroll to Top