ಶಾಂತಿ ಕದಡಿದ್ದಕ್ಕಾಗಿ ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಬಂಧನ

ಹೈದರಾಬಾದ್ : ಬಿಗ್ ಬಾಸ್ ತೆಲುಗು ಸೀಸನ್-7 ವಿನ್ನರ್ ಪಲ್ಲವಿ ಪ್ರಶಾಂತ್ ಅವರನ್ನು ಸೋಮವಾರ ರಾತ್ರಿ ಅನ್ನಪೂರ್ಣ ಸ್ಟುಡಿಯೋಸ್ ಬಳಿ ಶಾಂತಿ ಕದಡಿದ ಆರೋಪದ ಮೇಲೆ ತೆಲಂಗಾಣದ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಪ್ರಶಾಂತ್ ವಿಜೇತ ಎಂದು ಘೋಷಿಸಿದ ನಂತರ,ಅವರ ಬೆಂಬಲಿಗರು ಪುಂಡಾಟ ಮೆರೆದಿದ್ದರು. ಬಿಗ್ ಬಾಸ್ ಮನೆ ಇರುವ ಅನ್ನಪೂರ್ಣ ಸ್ಟುಡಿಯೋಸ್ ಎದುರು ದಾಂಧಲೆ ನಡೆಸಿ, ಕಾರು, ಬಸ್ಸುಗಳನ್ನು ಜಖಂ ಮಾಡಿದ್ದರು. ಇತರೆ ಸ್ಪರ್ಧಿಗಳ ಕಾರುಗಳಿಗೆ ಹಾನಿ ಮಾಡಿದ್ದರು. ಮಹಿಳಾ ಸ್ಪರ್ಧಿಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದರು. ಇದು ದೊಡ್ಡಮಟ್ಟದ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನು ಜ್ಯೂಬಿಲಿ ಹಿಲ್ಸ್ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ಪಲ್ಲವಿ ಪ್ರಶಾಂತ್‌ ಅವರನ್ನು ಎ1 ಆರೋಪಿಯನ್ನಾಗಿ ಮಾಡಿ, ಕೇಸ್ ದಾಖಲು ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಜುಬಿಹಿಲ್ಸ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಪ್ರಶಾಂತ್ ಮತ್ತು ಆತನ ಅನುಯಾಯಿಗಳ ವಿರುದ್ಧ ಕಾನೂನುಬಾಹಿರವಾಗಿ ಗುಂಪುಗೂಡುವಿಕೆ ಮತ್ತು ವಿಧ್ವಂಸಕ ಕೃತ್ಯಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಜುಬಿಹಿಲ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ತಿಳಿಸಿದ್ದಾರೆ.





























































































error: Content is protected !!
Scroll to Top