ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಅವಶ್ಯ – ಕೆ. ಕಮಲಾಕ್ಷ ಕಾಮತ್
ಕಾರ್ಕಳ : ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಮೀರಾ ಕಾಮತ್ ಕಾರ್ಕಳ ಅವರ ಸ್ಮರಣಾರ್ಥ ನಿರ್ಮಾಣಗೊಂಡ ನವೀಕೃತ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ನ. 20 ರಂದು ಜರುಗಿತು.
ಸಂಸ್ಥೆಗೆ ನೂತನ ಕಂಪ್ಯೂಟರ್‌ಗಳನ್ನು ಕೊಡುಗೆ ನೀಡಿದ ಕೆ. ಕಮಲಾಕ್ಷ ಕಾಮತ್ ಲ್ಯಾಬ್ ನವೀಕೃತ ಲ್ಯಾಬ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ತಾಂತ್ರಿಕ ಜ್ಞಾನ ಅವಶ್ಯ. ವಿದ್ಯಾರ್ಥಿಗಳು ಜಗತ್ತಿನ ಆಗು ಹೋಗುಗಳ ನಿತ್ಯ ವಿಸ್ಮಯ ಸಂಗತಿಗಳನ್ನು ತಿಳಿಯುವ ಕುತೂಹಲಿಗಳಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಎ. ಯೋಗೀಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ನರೇಂದ್ರ ಕಾಮತ್ ಕೆ., ಸದಸ್ಯರಾದ ಜ್ಯೋತಿ ಜೆ. ಪೈ, ಟಿ. ರಾಮಚಂದ್ರ ನಾಯಕ್, ಎಸ್. ನಿತ್ಯಾನಂದ ಪೈ, ಯೋಗೀಶ್ ಕಾಮತ್, ಮೋಹನ್ ಶೆಣೈ ಎರ್ಮಾಳ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಸ್ವಾಗತಿಸಿದರು. ಶಿಕ್ಷಕರಾದ ಆರ್. ನಾರಾಯಣ ಶೆಣೈ ಕಾರ್ಯಕ್ರಮ ನಿರೂಪಿಸಿ, ವೀಣಾ ಬಿ. ವಂದಿಸಿದರು.