ಕಾರ್ಕಳ ತಹಶೀಲ್ದಾರ್‌ ಆಗಿ ನರಸಪ್ಪ ಅಧಿಕಾರ ಸ್ವೀಕಾರ

ಕಾರ್ಕಳ : ಕಾರ್ಕಳ ತಾಲೂಕಿನ ತಹಶೀಲ್ದಾರ್‌ ಆಗಿ ನರಸಪ್ಪ ಅವರು ನ. 20 ರಂದು ಅಧಿಕಾರ ಸ್ವೀಕರಿಸಿದರು. ಮೂಲತಃ ರಾಯಚೂರಿನ ನರಸಪ್ಪ ಅವರು ಈ ಮೊದಲು ಬೀದರ್ ನಲ್ಲಿ ಪ್ರೊಬೆಷನರಿ ತಹಶೀಲ್ದಾರ್ ಆಗಿ ಕರ್ತವ್ಯ ಸಲ್ಲಿಸಿದ್ದರು. ಇದೀಗ ಕಾರ್ಕಳ ತಹಶೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಕಾರ್ಕಳದಲ್ಲಿ ತಹಶೀಲ್ದಾರ್‌ ಆಗಿದ್ದ ಬಿ. ಅನಂತಶಂಕರ್‌ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಹಶೀಲ್ದಾರ್‌ ಆಗಿ ವರ್ಗಾವಣೆ ಹೊಂದಿದ್ದು, ತೆರವಾದ ಸ್ಥಾನಕ್ಕೆ ನರಸಪ್ಪ ನೇಮಕಗೊಂಡಿದ್ದಾರೆ.error: Content is protected !!
Scroll to Top