ಪ್ರಶ್ನಿಸಿದ ಪೊಲೀಸರನ್ನೇ ದಬಾಯಿಸಿ ಬಾಯಿ ಮುಚ್ಚಿಸಿದ ಯುವಕ
ಬೆಂಗಳೂರು : ಏಕದಿನ ವಿಶ್ವಕಪ್ನಲ್ಲಿ ನಿನ್ನೆ ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೇಳೆ ಯುವಕನೊಬ್ಬ ಪಾಕ್ ಪರ ಘೋಷಣೆ ಕೂಗಿದ್ದಾನೆ. ಇದನ್ನು ಪೊಲೀಸರು ಆಕ್ಷೇಪಿಸಿದಾಗ ಪಾಕಿಸ್ಥಾನದಿಂದ ಬಂದಿದ್ದೇನೆ, ಪಾಕಿಸ್ಥಾನ ಪರ ಘೋಷಣೆ ಕೂಗಿದ್ದೇನೆ, ಭಾರತ್ ಮಾತಾಕಿ ಜೈ ಅಂತಾ ಕೂಗೋಕೆ ಆಗುತ್ತಾ ಎಂದು ದಬಾಯಿಸಿದ್ದಾನೆ.
ಆಸ್ಟ್ರೇಲಿಯಾ ಪರವಾಗಿ ಘೋಷಣೆ ಕೂಗಬಹುದು, ಪಾಕಿಸ್ಥಾನ ಪರ ಘೋಷಣೆ ಕೂಗಬಾರದಾ ಅಂತಾ ಪೊಲೀಸ್ ಅಧಿಕಾರಿಯನ್ನು ಕೇಳಿದ್ದಾನೆ. ಪಾಕಿಸ್ಥಾನ ಪರ ಘೋಷಣೆ ಕೂಗಬಾರದು ಅಂತ ಹೇಳುತ್ತಿದ್ದೀರಾ ವೀಡಿಯೊ ಮಾಡಿಕೊಳ್ಳುತ್ತೇನೆ, ಈಗ ಹೇಳಿ, ಪಾಕ್ ಪರ ಘೋಷಣೆ ಕೂಗಬಾರದಾ ಎಂದು ಕೇಳಿದ್ದಾನೆ.
ಯುವಕನ ಪ್ರಶ್ನೆಗೆ ತಬ್ಬಿಬ್ಬಾದ ಪೊಲೀಸ್ ಅಧಿಕಾರಿ, ತಾನು ಮೇಲಧಿಕಾರಿಯನ್ನು ಕೇಳುತ್ತೇನೆ ಎಂದು ಸ್ಥಳದಿಂದ ತೆರಳಿದ್ದಾರೆ. ಇದಕ್ಕೂ ಮುನ್ನ ಅಂದರೆ, ಮಧ್ಯಾಹ್ನ ಕ್ರೀಡಾಂಗಣದ ಒಳಗೆ ಪ್ರವೇಶಿಸುವ ವೇಳೆ ಇದೇ ಯುವಕನಿಗೆ ಪಾಕ್ ಬಾವುಟ ಕೊಂಡೊಯ್ಯಲು ಪೊಲೀಸರು ನಿರಾಕರಿಸಿದ್ದರು. ಈ ವೇಳೆಯೂ ಪೊಲೀಸರೊಂದಿಗೆ ಯುವಕ ವಾಗ್ವಾದ ನಡೆಸಿದ್ದ.









