ಏಷ್ಯನ್ ಗೇಮ್ಸ್ : ಪುರುಷರ 50 ಮೀ ಶೂಟಿಂಗ್‌ನಲ್ಲಿ ಭಾರತ ತಂಡಕ್ಕೆ ಚಿನ್ನ

ಹ್ಯಾಂಗ್‌ಝೌ : ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ 2023ರಲ್ಲಿ ಭಾರತೀಯರ ಪದಕ ಬೇಟೆ ಎಂದಿನಂತೆ ಮುಂದುವರೆದಿದ್ದು, ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತೀಯ ತಂಡವು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಸೆ. 29ರಂದು ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆಯೋರಾನ್ ಅವರ 50 ಮೀಟರ್ ರೈಫಲ್ 3Ps ಪುರುಷರ ಭಾರತ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತು.

2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಇದು 15ನೇ ಪದಕ ಮತ್ತು 7ನೇ ಚಿನ್ನವಾಗಿದೆ. ಭಾರತವು 1769 ಗಮನಾರ್ಹ ಅಂಕಗಳಿಸಿತು, ಕಳೆದ ವರ್ಷ ಪೆರುವಿನಲ್ಲಿ ಯುಎಸ್ಎನ ಹಿಂದಿನ ದಾಖಲೆಯನ್ನು 8 ಅಂಕಗಳಿಂದ ಮೀರಿಸಿದೆ.

ಚೀನಾ 1763 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗೆದ್ದುಕೊಂಡರೆ, ರಿಪಬ್ಲಿಕ್ ಆಫ್ ಕೊರಿಯಾ 1748 ಅಂಕಗಳೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿತು.

ಶೂಟಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ
ಈ ನಡುವೆ ಇಶಾ ಸಿಂಗ್, ಪಾಲಕ್ ಮತ್ತು ದಿವ್ಯಾ ಸೇರಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಒಟ್ಟು 1731 ಅಂಕ ಗಳಿಸಿದ್ದು, ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಚೀನಾ 1736 ಅಂಕಗಳೊಂದಿಗೆ ಚಿನ್ನ ಪಡೆದುಕೊಂಡಿದೆ.

ಗ್ರೂಪ್​ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಇಶಾ ಮತ್ತು ಪಾಲಕ್ ವೈಯಕ್ತಿಕ ಸ್ಪರ್ಧೆಯಲ್ಲೂ ಫೈನಲ್ ತಲುಪಿದ್ದಾರೆ. 10 ವರ್ಷದ ಇಶಾ ಸಿಂಗ್ ಈಗ ಏಷ್ಯನ್ ಗೇಮ್ಸ್ 2023 ರಲ್ಲಿ ತನ್ನ ನಾಲ್ಕನೇ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಈ ಹಿಂದೆ 25 ಮೀಟರ್‌ ಪಿಸ್ತೂಲ್‌ ಟೀಮ್‌ ವಿಭಾಗದಲ್ಲಿ ಚಿನ್ನ ಹಾಗೂ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.error: Content is protected !!
Scroll to Top