ಮನೆ ಮೇಲೆ ಪಾಕಿಸ್ಥಾನ ಧ್ವಜ ಹಾರಿಸಿದ ತಂದೆ-ಮಗ

ಪರಿಸರದಲ್ಲಿ ಆತಂಕಕ್ಕೆ ಕಾರಣವಾದ ಕೃತ್ಯ

ಲಖನೌ : ಉತ್ತರ ಪ್ರದೇಶದ ಮೊರಾದಾಬಾದ್‌ನ ಮನೆಯೊಂದರಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿದ ಬಳಿಕ ಪರಿಸರದಲ್ಲಿ, ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿದ್ದು, ಧ್ವಜ ಹಾರಿಸಿದ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿದ ಬಗ್ಗೆ ಜನರೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ, ಮನೆಯಲ್ಲಿದ್ದ ಧ್ವಜವನ್ನು ತೆಗೆದು ಹಾಕಿ ರಯೀಸ್ ಮತ್ತು ಅವನ ಮಗ ಸಲ್ಮಾನ್ ಎಂಬವನನ್ನು ಬಂಧಿಸಿದ್ದಾರೆ. ಈ ಕೃತ್ಯದ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿಯಲು ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ಮೊರಾದಾಬಾದ್‌ನ ಭಗತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬುರ್ಹಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬುರ್ಹಾನ್‌ಪುರ ಗ್ರಾಮದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ರಯೀಸ್ ಮತ್ತು ಅವರ ಪುತ್ರ ಸಲ್ಮಾನ್ ಬಿಳಿ ಮತ್ತು ಹಸಿರು ಬಟ್ಟೆಯಿಂದ ಪಾಕಿಸ್ತಾನಿ ಧ್ವಜವನ್ನು ತಯಾರಿಸಿ ಮನೆಯ ಮೇಲ್ಛಾವಣಿಯ ಮೇಲೆ ಹಾಕಿದ್ದರು.
ಈ ಧ್ವಜವನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಲ್ಛಾವಣಿಯ ಮೇಲೆ ಪಾಕಿಸ್ಥಾನದ ಧ್ವಜವನ್ನು ಸ್ಥಾಪಿಸಿರುವುದನ್ನು ನೋಡಿ ಯಾರೋ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ.







































































error: Content is protected !!
Scroll to Top