ಕಾರ್ಕಳ : ಉಡುಪಿ ಒಳಕಾಡು ಸರಕಾರಿ ಹೈಸ್ಕೂಲ್‌ನಲ್ಲಿ ಶುಕ್ರವಾರ ನಡೆದ ಎನ್‌ಪಿಇಪಿ ಕಾರ್ಯಕ್ರಮದ ಜಾನಪದ ನೃತ್ಯ ವಿಭಾಗದಲ್ಲಿ
ಕಾರ್ಕಳ ದುರ್ಗತೆಳ್ಳಾರಿನ ಶ್ರೀ ಬಿ. ಮಂಜುನಾಥ ಪೈ ಸ್ಮಾರಕ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿನಿಯರಾದ ಸುಕೀರ್ತಿ, ತ್ರಿಷಾ, ಖುಷಿ, ಶರಧಿ, ದೀಕ್ಷಾ, ಸಾನ್ವಿ ನೃತ್ಯದಲ್ಲಿ ಭಾಗವಹಿಸಿದ್ದರು. ಶಿಕ್ಷಕ ರಾಘವೇಂದ್ರ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿನಿಯರನ್ನು ಮುಖ್ಯಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಅಭಿನಂದಿಸಿದೆ.
ಜಾನಪದ ನೃತ್ಯ : ಮಂಜುನಾಥ ಪೈ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
