ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಳ್ಕಾಡು ಪ್ರಾಥಮಿಕ ಶಾಲಾ ಶೌಚಾಲಯ ನಿರ್ಮಾಣಕ್ಕಾಗಿ 50 ಸಾವಿರ ರೂ. ಮಂಜೂರಾಗಿದೆ. ಸಹಾಯಧನದ ಚೆಕ್ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ವಲಯ ನಿರ್ದೇಶಕ ಶಿವರಾಯ ಪ್ರಭು ಅವರು ಶುಕ್ರವಾರ ಕಡ್ತಲ ಗ್ರಾ.ಪಂ. ಅಧ್ಯಕ್ಷ ಸುಕೇಶ್ ಹೆಗ್ಡೆ ಅವರಿಗೆ ಹಸ್ತಾಂತರಿಸಿದರು.
ಹೆಬ್ರಿ ವಲಯ ಯೋಜನಾಧಿಕಾರಿ ಲೀಲಾವತಿ ಗೌಡ, ಅಜೆಕಾರು ವಲಯ ಮೇಲ್ವಿಚಾರಕ ಸಂತೋಷ್, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಪೂಜಾರಿ, ಒಕ್ಕೂಟದ ಅಧ್ಯಕ್ಷ ಶಾಂತಿ ಪ್ರಭು, ಜನಜಾಗೃತಿ ಅಧ್ಯಕ್ಷ ದೇವೇಂದ್ರ ಕಾಮತ್, ಮುದ್ರಾಡಿ ವಲಯಾಧ್ಯಕ್ಷ ರತ್ನಾಕರ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಜನಾರ್ಧನ ಬೇಳಿರಾಯ ಸ್ವಾಗತಿಸಿ, ಸಹಶಿಕ್ಷಕ ಸುಭಾಸ್ ನಿರೂಪಿಸಿದರು. ಜ್ಞಾನದೀಪ ಶಿಕ್ಷಕಿ ರೂಪಾ ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮುಳ್ಕಾಡು ಶಾಲೆಗೆ 50 ಸಾವಿರ ರೂ.
