ಕಾರ್ಕಳದಲ್ಲಿ ಹೃದಯಕ್ಕಾಗಿ ನಡಿಗೆ ಅಭಿಯಾನ
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ರೋಟರಾಕ್ಟ್ ಕ್ಲಬ್, ಶ್ರೀ ಭುವನೇಂದ್ರ ಕಾಲೇಜು, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಸೆ. 24ರ ಭಾನುವಾರ ಕಾರ್ಕಳದಲ್ಲಿ ಹೃದಯಕ್ಕಾಗಿ ನಡಿಗೆ ಕಾರ್ಯಕ್ರಮ ಜರುಗಲಿದೆ.
ವಿಶ್ವದಾದ್ಯಂತ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಆಚರಿಸಲ್ಪಡುವ ಈ ಕಾರ್ಯಕ್ರಮದಂಗವಾಗಿ ಅಂದು ಬೆಳಿಗ್ಗೆ 7 ಗಂಟೆಗೆ ಕಾರ್ಕಳ ಅನಂತಶಯನ ವೃತ್ತದಿಂದ ರೋಟರಿ ಆಸ್ಪತ್ರೆ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ.
ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾI ನಿರಂಜನ್ ಎನ್. ಚಿಪ್ಲೂಣ್ಕರ್ ಅಬಿಯಾನಕ್ಕೆ ಚಾಲನೆ ನೀಡಲಿರುವರು.
ಬೀದಿ ನಾಟಕ ಸ್ಪರ್ಧೆ
ಆಸ್ಪತ್ರೆ ಆವರಣದಲ್ಲಿ ಜೀವನ ಶೈಲಿ ಕಾಯಿಲೆಗಳು ಎನ್ನುವ ವಿಷಯದಲ್ಲಿ ಬೀದಿ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ. ಅನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತಜ್ಞ ವೈದ್ಯರು ಹೃದಯದ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿರುವರು. ಕಾರ್ಯಕ್ರಮದಲ್ಲಿ ಭಾಗವಹಿಸುಂತೆ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ ಎಂದು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಪ್ರಕಟನೆಯಲ್ಲಿ ತಿಳಿಸಿದೆ.