ಹೂವಿನ ಬೆಳೆಗಾರರ ಸಹಕಾರಿ ಸಂಘದ ವಾರ್ಷಿಕ ಸಭೆ

ಹೂವಿನ ಬೆಳೆಗಾರರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ – ಫ್ರಾನ್ಸಿಸ್ ಡಿʼಸೋಜಾ

ಕಾರ್ಕಳ : ಹೂವಿನ ಬೆಳೆಗಾರರ ಸಮಸ್ಯೆ ಕುರಿತು ಸರಕಾರದ ಗಮನಕ್ಕೆ ತರುವ ಪ್ರಯತ್ನವನ್ನು ನಮ್ಮ ಸಂಘವು ಮಾಡುತ್ತಿದೆ. ಹಾಗೆಯೇ ಬೆಳೆಗಾರರಿಗೆ ಸರಕಾರದಿಂದ ದೊರೆಯುವ ಸೌಲಭ್ಯ ಕುರಿತು ಅರಿವು ಮೂಡಿಸುತ್ತಿದೆ ಎಂದು ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹೇಳಿದರು.

ಶುಕ್ರವಾರ ಕಾರ್ಕಳದ ಪ್ರಕಾಶ್ ಹೊಟೇಲ್ ಸಭಾಂಗಣದಲ್ಲಿ ನಡೆದ ಹೂವಿನ ಬೆಳೆಗಾರರ ಸಹಕಾರಿ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಕಳದಲ್ಲಿ ಪ್ರಧಾನ ಕಚೇರಿ ಹೊಂದಿರುವ ನಮ್ಮ ಸಂಘವು ಹೆಬ್ರಿಯಲ್ಲೂ ಶಾಖೆ ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಶಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದೆ ಎಂದು ಫ್ರಾನ್ಸಿಸ್‌ ಹೇಳಿದರು.
ಸಂಘವು ಸದಸ್ಯರ ನಡುವೆ ಮಿತವ್ಯಯ, ಪರಸ್ಪರ ಸ್ವ-ಸಹಾಯ ಮತ್ತು ಸಹಕಾರದ ಮನೋಭಾವವನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ. ಸಂಘದಲ್ಲಿ ಇ-ಸ್ಟಾಂಪಿಂಗ್, ಪಾನ್ ಕಾರ್ಡ್, ಮಲ್ಲಿಗೆ ಗಿಡ ಸಹಿತ ವಿವಿಧ ಸೌಲಭ್ಯಗಳು ಕೂಡ ದೊರೆಯುತ್ತಿದೆ ಎಂದು ಫ್ರಾನ್ಸಿಸ್ ಡಿ ಸೋಜಾ ತಿಳಿಸಿದರು.
ಹೂವಿನ ಬೆಳೆಗಾರರ ಸಹಕಾರಿ ಸಂಘದ ನಿರ್ದೇಶಕ ಬಿ. ಶಶಿಕಾಂತ್ ಭಟ್, ಜಾನ್ ಟೆಲ್ಲಿಸ್ ಅಜೆಕಾರು, ವೆಂಕಟರಮಣ ಶರ್ಮಾ, ಫ್ಲೋರಾ ಮಂಡೋನ್ಸಾ, ಉದಯ್ ವಿ. ಶೆಟ್ಟಿ, ಸುಕುಮಾರ್ ಮುನಿಯಾಲ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಲತಾ ವಾರ್ಷಿಕ ವರದಿ ಮಂಡಿಸಿದರು. ವೀಣಾ ಸ್ವಾಗತಿಸಿ. ವಿಯೋಲ್ಲ ರೊಸಾರಿಯೋ ನಿರೂಪಿಸಿ, ಸಿಬ್ಬಂದಿ ವರ್ಗದವರು ಸಹಕರಿಸಿದರು.



































































































error: Content is protected !!
Scroll to Top