ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ, ಆದಿ ಆಲಡೆ ಕ್ಷೇತ್ರ

ಸೆ. 19 ರಂದು ಗಣೇಶ ಚತುರ್ಥಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

ಕಾರ್ಕಳ : ತೆಳ್ಳಾರು ಕಲ್ಲೊಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ, ಆದಿ ಆಲಡೆ ಕ್ಷೇತ್ರದಲ್ಲಿ ಸೆ. 19 ರಂದು ಗಣೇಶ ಚತುರ್ಥಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದ್ದು, 10 ಗಂಟೆಗೆ ಅಲಂಕಾರ ಪೂಜೆ, 11-30ಕ್ಕೆ ಭಜನೆ ಕಾರ್ಯಕ್ರಮ ಆರಂಭ, 12 ಗಂಟೆಗೆ ಗಣೇಶ ಕಲ್ಪೋಕ್ತ ಪೂಜೆ, 12.30 ಕ್ಕೆ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7.30 ಗಂಟೆಗೆ ವಿಶೇಷ ಹೂವಿನ ಪೂಜೆ, 8 ಗಂಟೆಗೆ ರಂಗಪೂಜೆಯಾಗಿ ಪ್ರಸಾದ ವಿತರಣೆಯಾಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಶ್ರೀ ಮಹಾಗಣಪತಿ ದೇವರು
error: Content is protected !!
Scroll to Top