ಶ್ರೀಲಂಕಾ ವಿರುದ್ಧ 10 ವಿಕೆಟ್ ಜಯ
ಕೊಲಂಬೊ : ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ 8ನೇ ಬಾರಿಗೆ ಭಾರತ ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 50 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ 51 ರನ್ ಗುರಿ ನೀಡಿತ್ತು. ಈ ಸುಲಭ ಗುರಿ ಬೆನ್ನಟ್ಟಿದ ಭಾರತ 6.1 ಓವರ್ ಗೆ ವಿಕೆಟ್ ನಷ್ಟವಿಲ್ಲದೆ 51 ರನ್ ಬಾರಿಸುವ ಮೂಲಕ ಗೆಲುವು ದಾಖಲಿಸಿತು. ಮೊಹಮದ್ ಸಿರಾಜ್ ಘಾತಕ ಸ್ಪೆಲ್ 7-1-21-6 ವಿಜಯದ ಟ್ರಂಪ್ ಕಾರ್ಡ್ ಆದರು. ಪಾಂಡ್ಯ ಮೂರು ವಿಕೆಟ್, ಬುಮ್ರಾ 1 ವಿಕೆಟ್ ಪಡೆದರು. ಶುಭಮನ್ ಗಿಲ್ (27) ಮತ್ತು ಇಶಾನ್ ಕಿಶನ್ (23) ಅಜೇಯರಾಗಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ಭಾರತ 10 ವಿಕೆಟ್ ಗಳ ಗೆಲುವು ದಾಖಲಿಸಿತ್ತು.