ಕೊಲಂಬೊ : ಏಷಿಯಾ ಕಪ್ ಕ್ರಿಕೆಟ್ ಕೂಟದ ಫೈನಲ್ ಪಂದ್ಯ ಏಕಪಕ್ಷೀಯವಾಗಿ ಸಾಗುವ ಲಕ್ಷಣ ಗೋಚರಿಸುತ್ತಿದೆ. ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, 18 ರನ್ ಪೇರಿಸುವ ಹೊತ್ತಿಗೆ 6 ವಿಕೆಟ್ ಕಳೆದುಕೊಂಡು ದಿಕ್ಕು ತಪ್ಪಿದ ಹಡಗಿನಂತೆ ಆಗಿದೆ. ಭಾರತ ತಂಡದ ಮೊಹಮದ್ ಸಿರಾಜ್ ತನ್ನ ಘಾತಕ ಸ್ಪೆಲ್ ಮೂಲಕ ಐದು ವಿಕೆಟ್ ಕಬಳಿಸಿದ್ದಾರೆ. ಒಂದು ವಿಕೆಟ್ ಜಸ್ಪ್ರೀತ್ ಬುಮ್ರಾ ಪಾಲಾಗಿದೆ. ಶ್ರೀಲಂಕಾದ ಪ್ರಮುಖ ಆಟಗಾರರು ಈಗಾಗಲೇ ಪೆವಿಲಿಯನ್ ಸೇರಿದ್ದು ಭಾರತವು ಏಷಿಯಾ ಕಪ್ ಕೂಟದಲ್ಲಿ ಪ್ರಶಸ್ತಿ ಎತ್ತುವ ತವಕದಲ್ಲಿದೆ. ಮಳೆ ಕಾರಣ ಪಂದ್ಯದ ಆರಂಭಕ್ಕೆ ಕೊಂಚ ಅಡಚಣೆ ಎದುರಾಯಿತು. 3:40ಕ್ಕೆ ಆಟ ಶುರುವಾಗಿ ಮೊದಲ ಓವರ್‌ನಲ್ಲೇ ವೇಗಿ ಜಸ್‌ಪ್ರೀತ್ ಬುಮ್ರಾ ವಿಕೆಟ್ ಪಡೆದು ಉತ್ತಮ ಆರಂಭ ಒದಗಿಸಿದರು. ನಾಲ್ಕು ಓವರ್‌ಗಳಲ್ಲಿ ಮೊಹಮ್ಮದ್ ಸಿರಾಜ್ 5 ವಿಕೆಟ್ ಉರುಳಿಸಿ ಆತಿಥೇಯರಿಗೆ ಮರ್ಮಾಘಾತ ನೀಡಿದರು.
11 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಶ್ರೀಲಂಕಾ 33 ರನ್ ಗಳಿಸಿದೆ.
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕುಸಾಲ್ ಮೆಂಡಿಸ್ ಕ್ಲೀನ್ ಬೌಲ್ಡ್.
34 ಎಸೆತಗಳಲ್ಲಿ 17 ರನ್ಗಳಿಸಿ ವಿಕೆಟ್ ಒಪ್ಪಿಸಿದ ಮೆಂಡಿಸ್
ಶ್ರೀಲಂಕಾ ತಂಡದ 8ನೇ ವಿಕೆಟ್ ಪತನ
ಶ್ರೀಲಂಕಾ ತಂಡದ 9ನೇ ವಿಕೆಟ್ ಪತನ – ಕೇವಲ 50 ರನ್ಗಳಿಗೆ 9 ವಿಕೆಟ್ ಕಳೆದುಕೊಂಡ ಶ್ರೀಲಂಕಾ.
ಹಾರ್ದಿಕ್ ಪಾಂಡ್ಯಗೆ 2 ವಿಕೆಟ್, ಮೊಹಮ್ಮದ್ ಸಿರಾಜ್ಗೆ 6 ವಿಕೆಟ್, ಬುಮ್ರಾಗೆ 1 ವಿಕೆಟ್.
50 ರನ್ಗಳಿಗೆ ಶ್ರೀಲಂಕಾ ಆಲೌಟ್
ನ್ಯೂಸ್ ಅಪಡೇಟ್‌ಗೊಳ್ಳುತ್ತಿದೆ……