ಅಮೃತ ಭಾರತಿ ಹಳೆವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ರಾಮ್ ಗಣೇಶ್‌

ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷತ್ ರಾವ್, ವಿದ್ಯಾ ಮಲ್ಯ – ಕೋಶಾಧಿಕಾರಿಯಾಗಿ ಅರ್ಜುನ್ ಭಟ್

ಹೆಬ್ರಿ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಾಮ್‌ ಗಣೇಶ್‌ ಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷತ್ ರಾವ್ ಮತ್ತು ವಿದ್ಯಾ ಮಲ್ಯ ಹಾಗೂ ಕೋಶಾಧಿಕಾರಿಯಾಗಿ ಅರ್ಜುನ್ ಭಟ್ ಆಯ್ಕೆಯಾಗಿದ್ದಾರೆ. ಸೆ. 17 ರಂದು ಸಂಸ್ಥೆಯಲ್ಲಿ ನಡೆದ ಹಳೆವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. 2011 ರಲ್ಲಿ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಪ್ರಾರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ಹಳೆ ವಿದ್ಯಾರ್ಥಿಗಳ ಸಂಘ ಪ್ರಾರಂಭಗೊಂಡಿರುತ್ತದೆ. 2011-2013 ಬ್ಯಾಚ್‌ನ ವಿದ್ಯಾರ್ಥಿಗಳು ಸೇರಿ ಸಂಘ ಪ್ರಾರಂಭ ಮಾಡಿದ್ದು, ಮುಂದೆ ಸದಸ್ಯರ ಸೇರ್ಪಡೆಯಾದಂತೆ ಇನ್ನುಳಿದ ಪದಾಧಿಕಾರಿಗಳ ಆಯ್ಕೆಯಾಗಲಿದೆ ಎಂದು ಅಧ್ಯಕ್ಷ ರಾಮ್‌ ಗಣೇಶ್‌ ತಿಳಿಸಿದ್ದಾರೆ.









































































































































































error: Content is protected !!
Scroll to Top