ಉದಯ ನಿಧಿ ಸ್ಟಾಲಿನ್‌ ಸಮಸ್ತ ಹಿಂದೂ ಧರ್ಮೀಯರಲ್ಲಿ ಕ್ಷಮೆಯಾಚಿಸಬೇಕು – ಗುರುಪ್ರಸಾದ್ ನಾರಾವಿ

ಕಾರ್ಕಳ : ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಜಗತ್ತಿನ ಆದಿ ಧರ್ಮವೆಂದು ಪರಿಗಣಿತ ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಉದಯ ನಿಧಿ ಸ್ಟಾಲಿನ್‌ ಸಮಸ್ತ ಹಿಂದೂ ಧರ್ಮೀಯರಲ್ಲಿ ಕ್ಷಮೆಯಾಚಿಸಬೇಕು ಮಾತ್ರವಲ್ಲದೆ ತಮಿಳುನಾಡು ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಬೇಕು ಎಂದು ಕಾರ್ಕಳ ತಾಲೂಕು ಹಿಂದು ಜಾಗರಣ ವೇದಿಕೆಯ ಸಂಚಾಲಕ ಗುರುಪ್ರಸಾದ್ ನಾರಾವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸನಾತನ ಹಿಂದೂ ಧರ್ಮವು ಕ್ರೈಸ್ತ ಮತ್ತು ಇಸ್ಲಾಂ ಮತ ಧರ್ಮೀಯರನ್ನು ಆದರದಿಂದ ಕಂಡು ಅವರಿಗೂ ನಮ್ಮ ನೆಲದಲ್ಲಿ ಆಶ್ರಯ ನೀಡಿದೆ. ಸನಾತನ ಧರ್ಮ ಸರ್ವಧರ್ಮೀಯರನ್ನು ಸಹೋದರರಂತೆ ಕಾಣುವ ವಿಶ್ವಶ್ರೇಷ್ಠ ಧರ್ಮ. ಇಂತಹ ಪವಿತ್ರ ಧರ್ಮವನ್ನು ನಿಂದಿಸಿರುವ ಉದಯ್ ಸ್ಟಾಲಿನ್ ಮೇಲೆ ಪೋಲೀಸರು ಮತ್ತು ನ್ಯಾಯಾಲಯ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.









































































































































































error: Content is protected !!
Scroll to Top