ನಂದಿನಿ ತುಪ್ಪ ಖರೀದಿಸುವಂತೆ ವಿನಂತಿಸಿ ಟಿಟಿಡಿಗೆ ಪತ್ರ

ತುಪ್ಪದ ರಾಜಕೀಯ ಬಿರುಸಾದ ಬೆನ್ನಿಗೆ ಕೆಎಂಎಫ್‌ನಿಂದ ವಿನಂತಿ

ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗೆ ನಂದಿನ ತುಪ್ಪ ಪೂರೈಕೆ ಸ್ಥಗಿತವಾಗಿರುವ ವಿಚಾರ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾದ ಬೆನ್ನಿಗೆ ಕೆಎಂಎಫ್‌ ಟಿಟಿಡಿಗೆ ಪತ್ರ ಬರೆದು ನಮ್ಮ ತುಪ್ಪ ಖರೀದಿಸಿ ಎಂದು ವಿನಂತಿಸಿದೆ. ನಾವು ಹಿಂದಿನಂತೆ ನಿಮಗೆ ತುಪ್ಪ ಪೂರೈಸಲು ಉತ್ಸುಕರಾಗಿದ್ದೇವೆ. ತುಪ್ಪದ ದರದ ಬಗ್ಗೆ ಚರ್ಚಿಸಲು ಸಭೆ ಆಯೋಜಿಸಬೇಕು ಎಂದು ಮನವಿ ಮಾಡಿದೆ. ಟೆಂಡರ್‌ಗಳಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ಬಿಡ್ಡಿಂಗ್‌ಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ತುಪ್ಪವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಪತ್ರದಲ್ಲಿ ಕೆಎಂಎಫ್ ಹೇಳಿದೆ.
ನಾವು ಪ್ರತಿ ವರ್ಷ 30 ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದನೆ ಮಾಡುತ್ತೇವೆ. ನಾವು ನಿಮಗೆ ತುಪ್ಪ ಪೂರೈಕೆ ಮಾಡಲು ತುಂಬಾ ಉತ್ಸುಕರಾಗಿದ್ದೇವೆ. ನಮ್ಮ ಜತೆ ಒಂದು ಸಭೆಯನ್ನು ಆಯೋಜನೆ ಮಾಡಿ ದರದ ಬಗ್ಗೆ ಚರ್ಚೆ ಮಾಡೋಣ ಎಂದು ಪತ್ರದಲ್ಲಿ ಹೇಳಲಾಗಿದೆ. ತುಪ್ಪ ಪೂರೈಕೆಯಾಗದಿರುವ ಕುರಿತು ಮಾಧ್ಯಮಗಳಲ್ಲಿ ಉಂಟಾಗಿರುವ ವಿವಾದದ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಕೆಎಂಎಫ್ ಕೋರಿದೆ.
ಇತ್ತೀಚಿನ ದಿನಗಳಲ್ಲಿ ಟೆಂಡರ್‌ಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಬಿಡ್ಡಿಂಗ್‌ಗಳಿಂದಾಗಿ ಕೆಎಂಎಫ್ ಟಿಟಿಡಿಗೆ ತುಪ್ಪವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಕೆಎಂಎಫ್ ಸಹಕಾರಿ ರೈತ ಸಂಘಟನೆಯಾಗಿರುವುದರಿಂದ ಟೆಂಡರ್‌ಗಳಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ಹೋಗುವುದಿಲ್ಲ. ಏಕೆಂದರೆ ಅಂತಹ ದರದಲ್ಲಿ ತುಪ್ಪದ ಉತ್ಪಾದನಾ ವೆಚ್ಚವನ್ನು ವಸೂಲಿ ಮಾಡಲು ಕಷ್ಟವಾಗುತ್ತದೆ ಎಂದು ಕೆಎಂಎಫ್ ಎಂಡಿ ಎಂ.ಕೆ. ಜಗದೀಶ್ ಅವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.













































































error: Content is protected !!
Scroll to Top