ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ : ದೀರ್ಘಕಾಲದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಕಸಬಾ ಗ್ರಾಮದ ಪುಲ್ಕೇರಿ ಬೈಪಾಸ್‌ನಲ್ಲಿ ಜೂ. 15 ರಂದು ಸಂಭವಿಸಿದೆ. ಪುಲ್ಕೇರಿ ಬೈಪಾಸ್‌ ಅಸ್ಲಾಂ ಮಂಜಿಲ್‌ನ ನಿವಾಸಿ ಮುಸ್ತಾಕ್‌ (40) ಆತ್ಮಹತ್ಯೆ ಮಾಡಿಕೊಂಡವರು.
ಮುಸ್ತಾಕ್‌ಗೆ ಸುಮಾರು 6 ತಿಂಗಳಿನಿಂದ ಹೊಟ್ಟೆನೋವು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇದ್ದು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ರಾತ್ರಿ ಮನೆಯ ಪಕ್ಕದಲ್ಲಿ ಇದ್ದ ದೂರದ ಸಂಬಂಧಿ ರಹೀಮ್ ಅಬ್ದುಲ್ ಅಜೀಜ್ ಎಂಬುವವರ ಮನೆಯ ಹಿಂಭಾಗ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ತೌಸೀಫ್‌ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































error: Content is protected !!
Scroll to Top