ಒಂದೇ ಬುಲೆಟ್‌ನಿಂದ ಗಂಡ-ಹೆಂಡತಿ ಸಾವು
ಲಖನೌ : ಪತ್ನಿಗೆ ಹಾರಿಸಿದ ಗುಂಡು ಒತ್ನಿಯ ಜತೆಗೆ ಪತಿಯನ್ನೂ ಬಲಿ ತೆಗೆದುಕೊಂಡ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಸಂಭವಿಸಿದೆ. ಒಂದೇ ಗುಂಡಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಪತಿ ಹೆಂಡತಿಯನ್ನು ತಬ್ಬಿಕೊಂಡು ಅವಳ ಬೆನ್ನಿಗೆ ಗುಂಡು ಹಾರಿಸಿದ್ದನು. ಆದರೆ ಅದೇ ಬುಲೆಟ್ ಆತನ ಎದೆಯನ್ನು ಸೀಳಿ ಇಬ್ಬರೂ ಮೃತಪಟ್ಟಿದ್ದಾರೆ.
ಅನೇಕ್ ಪಾಲ್‌ಗೆ (40) ಪತ್ನಿಯ ನಡವಳೀಕೆ ಮೇಲೆ ಸಂಶಯವಿತ್ತು. ಹೀಗಾಗಿ ಇಬ್ಬರ ನಡುವೇ ಪದೇ ಪದೆ ಜಗಳವಾಗುತ್ತಿತ್ತು. ಮತ್ತು ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಇಬ್ಬರೂ ಚಂಡೀಗಢದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮೊರಾದಾಬಾದ್‌ಗೆ ಬಂದಿದ್ದರು. ಮದುವೆ ಸಮಾರಂಭದಲ್ಲಿ ಮೊಬೈಲ್ ಪತ್ನಿ ಕಳೆದುಕೊಂಡಿದ್ದ ನಂತರ ದಂಪತಿ ನಿರಂತರ ಜಗಳವಾಡುತ್ತಿದ್ದರು. ಜೂನ್ 13ರಂದು ಮಧ್ಯರಾತ್ರಿ ಅನೇಕ್ ಪಾಲ್ ಮನೆಯಲ್ಲಿ ವಿಚಿತ್ರ ರೀತಿಯ ಪೂಜೆಯನ್ನು ಮಾಡಿ ನಂತರ ಹೆಂಡತಿಯನ್ನು ತಬ್ಬಿಕೊಂಡು ಗುಂಡು ಹಾರಿಸಿದ್ದಾನೆ. ಅದೇ ಗುಂಡು ಅನೇಕ್ ಪಾಲ್ ಎದೆಗೆ ತಾಗಿ ಬೆನ್ನಿನ ಮೂಲಕ ಹಾದು ಹೋಗಿತ್ತು. ಗುಂಡು ತಗುಲಿ ಇಬ್ಬರಿಗೂ ಗಾಯಗಳಾಗಿತ್ತು. ಆಸ್ಪತ್ರೆಗೆ ಕರೆದೊಯ್ದರೂ ಉಳಿಸಲು ಸಾಧ್ಯವಾಗಲಿಲ್ಲ. ದಂಪತಿ ಸಾವಿನಿಂದ ಅವರ ನಾಲ್ವರು ಮಕ್ಕಳು ಅನಾಥರಾಗಿದ್ದಾರೆ.
























