ತಿರುವನಂತಪುರ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ ತಿರುವನಂತಪುರಂನ ವಿದ್ಯಾರ್ಥಿಯ ಜೀವನ ಪಯಣವು ಏಕಾಏಕಿ ಅಂತ್ಯವಾದರೂ ಕೂಡ ಆತ ಆರು ಜನರ ಬದುಕಿಗೆ ಜೀವ ಸೆಲೆಯಾಗಿದ್ದಾನೆ. ದುರಂತವೆಂದರೆ ಫಲಿತಾಂಶ ಪ್ರಕಟವಾಗುವ ಎರಡು ದಿನ ಮುಂಚೆಯೇ ಆತ ಜೀವ ಕಳೆದುಕೊಂಡಿದ್ದಾನೆ.
ಮೇ 13 ರಂದು ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಸಾರಂಗ್ ಎಂಬ ವಿದ್ಯಾರ್ಥಿ ಮೇ17ರಂದು ಮೃತಪಟ್ಟಿದ್ದ. ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಸಾರಂಗ್ ಪೋಷಕರು ಅಂಗಾಂಗ ದಾನ ಮಾಡಿದರು. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರು ಜನರಿಗೆ ಕಣ್ಣು, ಕಿಡ್ನಿ, ಹೃದಯ, ಲಿವರ್ ಅಂಗಗಳನ್ನು ವೈದ್ಯರು ಯಶಸ್ವಿಯಾಗಿ ಜೋಡಿಸಿದ್ದಾರೆ.
ಕೇರಳ ಪ್ರೌಢಶಿಕ್ಷಣ ಇಲಾಖೆಯು ಮೇ19ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಇದರಲ್ಲಿ ಮೃತ ಸಾರಂಗ್ ಎ+ ಗ್ರೇಡ್‌ನಲ್ಲಿ ಉತ್ತೀರ್ಣಗೊಂಡಿದ್ದ. ತನ್ನ ಸಾಧನೆಯನ್ನು ಸಂಭ್ರಮಿಸಲು ಆತ ಬದುಕಿಲ್ಲ. ಆದರೆ ಆತನ ಮತ್ತೊಂದು ಸಾಧನೆ ಆರು ಜನರ ಜೀವನಕ್ಕೆ ಬೆಳಕಾಗಿದ್ದಾರೆ.










































