ಕಾರ್ಕಳ : ಹಿಂದೂ ಜಾಗರಣ ವೇದಿಕೆ ವತಿಯಿಂದ ಮೇ21-22ರಂದು ಮುಂಜಾನೆ 10ಗಂಟೆಗೆ ದಿ ಕೇರಳ ಸ್ಟೋರಿ ಸಿನೆಮಾದ ಉಚಿತ ಪ್ರದರ್ಶನವನ್ನು ಕಾರ್ಕಳದ ಮೂವಿ ಪ್ಲಾನೆಟ್ ಚಿತ್ರಮಂದಿರದಲ್ಲಿ 18 ವರ್ಷ ಮೇಲ್ಪಟ್ಟ ಹಿಂದೂ ಸಹೋದರ-ಸಹೋದರಿಯರಿಗೆ ವೀಕ್ಷಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ಇಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹಿಂದೂ ಜಾಗರಣ ವೇದಿಕೆಯ ಪ್ರಮುಖರೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದರು. ಹಿಂಜಾವೇ. ವಿಭಾಗ ಕಾರ್ಯದರ್ಶಿ ಮಹೇಶ್ ಬೈಲೂರು, ಜಿಲ್ಲಾ ಸಂಯೋಜಕ ಉಮೇಶ್ ನಾಯ್ಕ್ ಸೂಡ, ತಾಲೂಕು ಯುವವಾಹಿನಿ ಸಂಯೋಜಕ ಸುಜಿತ್ ಕುಂದರ್ ಮತ್ತು ಹಲವಾರು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು. ಬುಕಿಂಗ್‌ಗಾಗಿ ದೂರವಾಣಿ ಸಂಖ್ಯೆ 9945304496, 8105353709, 9663580818 ಸಂಪರ್ಕಿಸಬಹುದಾಗಿದೆ.










































