ಪಾಕಿಸ್ಥಾನಿ ಹನಿಟ್ರ್ಯಾಪ್‌ಗೆ ಬಿದ್ದ ಡಿಆರ್‌ಡಿಒ ವಿಜ್ಞಾನಿ

ರಹಸ್ಯ ಮಾಹಿತಿಗಳ ರವಾನೆ

ಹೊಸದಿಲ್ಲಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಹಿರಿಯ ವಿಜ್ಞಾನಿಯೊಬ್ಬರು ಪಾಕಿಸ್ಥಾನದ ಹನಿಟ್ರ್ಯಾಪ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಿದೆ.
ವರ್ಚುವಲ್‌ನಲ್ಲಿ ಹನಿಟ್ರ್ಯಾಪ್ ಬಲೆಗೆ ಬಿದ್ದು ಪಾಕಿಸ್ಥಾನಿ ಗೂಢಚಾರರಿಗೆ ಮಾಹಿತಿ ಸೋರಿಕೆ ಮಾಡಿರುವುದು ತನಿಖೆಯಿಂದ ತಿಳಿದುಬಂದ ನಂತರ ಹಿರಿಯ ವಿಜ್ಞಾನಿ, ಪ್ರಯೋಗಾಲಯದ ನಿರ್ದೇಶಕ ಪ್ರದೀಪ್ ಕುರುಲ್ಕರ್ ಅವರನ್ನು ಡಿಆರ್‌ಡಿಒ ಸೇವೆಯಿಂದ ಅಮಾನತುಗೊಳಿಸಿದೆ.
ದೇಶದ ಗೌಪ್ಯ ಮಾಹಿತಿಗಳನ್ನು app ಮೂಲಕ ವಿದೇಶಿ ಏಜೆಂಟ್‌ಗಳಿಗೆ ರವಾನಿಸಿದ ಆರೋಪದಲ್ಲಿ ವಿಜ್ಞಾನಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು. ತನಿಖೆಯಲ್ಲಿ ಅವರು ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿರುವುದು ಕಂಡುಬಂದ ನಂತರ ಪ್ರಯೋಗಾಲಯದ ನಿರ್ದೇಶಕ ಸ್ಥಾನದಿಂದ ಕಿತ್ತುಹಾಕಲಾಗಿದೆ ಎಂದು ಡಿಆರ್‌ಡಿಒ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.











































error: Content is protected !!
Scroll to Top