ಗುಂಡು ಹಾರಿಸಿಕೊಂಡು ಪೊಲೀಸ್‌ ಕಾನ್‌ಸ್ಟೇಬಲ್‌ ಆತ್ಮಹತ್ಯೆ

ಕಲಬುರಗಿ : ಚಿತ್ತಾಪುರ ಪಟ್ಟಣದ ತಹಶೀಲ್ದಾರ್‌ ಕಚೇರಿಯ ಕಟ್ಟಡದ ಮೇಲೆ ಪೊಲೀಸ್‌ ಕಾನ್ಸ್ಟೇಬಲ್‌ ಒಬ್ಬರು ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಮೇ4ರಂದು ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ ಮಲ್ಲಿಕಾರ್ಜುನ ಎಂಬುವವರು ಮೃತಪಟ್ಟವರು ಎಂದು ತಿಳಿದು ಬಂದಿದೆ.
ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಮಲ್ಲಿಕಾರ್ಜುನ ಬೆಳಗಿನ ಜಾವ ಮೂರು ಗಂಟೆಗೆ ತಹಶೀಲ್ದಾರ್‌ ಕಚೇರಿಗೆ ಬಂದಿದ್ದಾರೆ. ಜೊತೆಯಲ್ಲಿದ್ದವರಿಗೆ ಸ್ವಲ್ಪ ಮೇಲೆ ಹೋಗಿ ಬರುತ್ತೇನೆ ಎಂದು ಕಟ್ಟಡದ ಮೇಲೆ ಹೋಗಿದ್ದು, ನಂತರ ಅವರ ಮೊಬೈಲಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದಿದ್ದಾಗ ನಿದ್ದೆ ಮಾಡುತ್ತಿರಬೇಕು ಎಂದು ಜೊತೆಯಲ್ಲಿದ್ದವರು ಸುಮ್ಮನಾಗಿದ್ದರು. ಮುಂಜಾನೆ ಕಚೇರಿಯ ಸ್ವಚ್ಛತಾ ಸಿಬ್ಬಂದಿ ಕಟ್ಟಡದ ಮೇಲೆ ಬಂದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿರುತ್ತದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್‌ ಠಣೆಯ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್‌ಐ ನಂದಕುಮಾರ, ತಹಶೀಲ್ದಾರ್‌ ಷಾಷಾವಲಿ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.







































































error: Content is protected !!
Scroll to Top