ಹೆಬ್ರಿ : ಕಲಿಕೆ ಎಂದರೆ ಕೇವಲ ಮಾಹಿತಿಯನ್ನು ತಲೆಗೆ ತುಂಬುವುದಲ್ಲ. ಬದಲಾಗಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದಾಗಿದೆ ಎಂದು ಹೆಬ್ರಿ ಜೆಸಿಐ ಪೂರ್ವಾಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಎ. 13 ರಂದು ಹೆಬ್ರಿ ಜೇಸಿಐ ವತಿಯಿಂದ ಕುಚ್ಚೂರು ಸ. ಹಿ. ಪ್ರಾ. ಶಾಲೆಯಲ್ಲಿ ನಡೆದ ಚಿಣ್ಣರ ಚಿಲಿ ಪಿಲಿ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ಮಕ್ಕಳಿಗೆ ನೀಡುವಂತಹ ತರಬೇತಿ, ವಿನೂತನ ಚಟುವಟಿಕೆಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವುದು ಎಂದು ವಿಠಲ ಶೆಟ್ಟಿ ಹೇಳಿದರು.
ಶಿಬಿರದಲ್ಲಿ ಕತ್ತರಿ ಚಟುವಟಿಕೆಗಳಾದ ಬುಟ್ಟಿ ತಯಾರಿ, ಪ್ರಾಣಿ ಪಕ್ಷಿಗಳ ಕ್ರಾಫ್ಟ್ ಚಟುವಟಿಕೆ, ವಿಜ್ಞಾನದ ಪರಿಕರ ತಯಾರಿ, ಟೊಪ್ಪಿ ತಯಾರಿ, ಮುಖವಾಡ ತಯಾರಿ, ಭಾಷಾ ಚಟುವಟಿಕೆಗಳು, ಅಭಿನಯಗಳು, ಅಬಾಕಸ್ ಚಟುವಟಿಕೆ, ಚಿತ್ರಕಲೆ, ವರ್ಲಿ ಕಲೆಗಳು, ರಂಗ ಅಭಿನಯ ಮುಖವರ್ಣಿಕೆ ಮುಂತಾದ ವೈವಿದ್ಯಮಯ ಚಟುವಟಿಕೆಗಳು ನಡೆದವು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಪುರ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಕಮಲ್ ಅಹಮದ್, ನಕ್ರೆ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಪ್ರಸನ್ನ ಕುಮಾರ್ ಶೆಟ್ಟಿ, ಜಾರ್ಕಳ ಮುಂಡ್ಲಿ ಸ. ಹಿ. ಪ್ರಾ. ಶಾಲೆಯ ಸಹ ಶಿಕ್ಷಕಿ ಆಶಾ, ರಂಗಕಲಾವಿದ ರಮೇಶ್ ಕಪಿಲೇಶ್ವರ್, ಸತೀಶ್ ಬೇಳೆಂಜೆ , ಹೆಬ್ರಿ ಅಬಾಕಸ್‌ನ ಶಿಕ್ಷಕಿ ಸುನೀತಾ ಹೆಬ್ಬಾರ್ ಭಾಗವಹಿಸಿದರು. ಜೇಸಿಐ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ಅಧ್ಯಕ್ಷ ಮಂಜುನಾಥ ಕೆ. ಶಿವಪುರ, ಶಿವಪುರ ಸಿಆರ್‌ಪಿ ಪ್ರೀತೇಶ್ ಶೆಟ್ಟಿ , ಜೇಸಿ ನಿಕಟಪೂರ್ವ ಅಧ್ಯಕ್ಷ ರೂಪೇಶ್, ಜೇಸಿ ರೇಟ್ ಅಧ್ಯಕ್ಷೆ ಅನಿತಾ ಪಿ. ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಮಾಲಿನಿ ಮತ್ತು ಸಹಶಿಕ್ಷಕರಾದ ಲಕ್ಷ್ಮೀ ನಾರಾಯಣ, ಮಂಜುನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಉದಯ ಶೇರಿಗಾರ್ ಸ್ವಾಗತಿಸಿ, ಜೀಸಿಐ ಕಾರ್ಯದರ್ಶಿ ಸತೀಶ್ ಬೇಳೆಂಜೆ ವಂದಿಸಿದರು.
ಹೆಬ್ರಿ ಜೇಸಿಐ ವತಿಯಿಂದ ಚಿಣ್ಣರ ಚಿಲಿಪಿಲಿ ಬೇಸಿಗೆ ಶಿಬಿರ
























