ಕಾರ್ಕಳ: ಕೃಷಿ ಭೂಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಉಂಟಾದ ಘಟನೆ ಮಾ. 20ರ ಸಂಜೆ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯ ಕುದ್ರೊಟ್ಟುವಿನ ಪಾಲ್ದಡಿಯಲ್ಲಿ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆ ತೋಟದಲ್ಲಿದ್ದ ತೆಂಗು, ಹಲಸು, ಮಾವಿನ ಮರಗಳು ಆಹುತಿಯಾಗಿದ್ದು, ಬೈಹುಲ್ಲಿನ ರಾಶಿಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ತೋಟದಲ್ಲಿದ್ದ ಪಂಪ್ ಶೆಡ್‌ಗೂ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದ್ದು, ತೋಟದಲ್ಲಿ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಡ್ಕೂರು : ಕೃಷಿ ಭೂಮಿಗೆ ಆಕಸ್ಮಿಕ ಬೆಂಕಿ – ಅಪಾರ ಹಾನಿ






















