ಕಾರ್ಕಳ : 157 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಜಾಗದ ಮಾಲಿಕರಿಗೆ ಜಾಗದ ಒಡೆತನವನ್ನು ನೀಡಿದ ಧನ್ಯತಾ ಭಾವ : ವಿ. ಸುನೀಲ್‌ ಕುಮಾರ್

ಕಾರ್ಕಳ : ಸರಕಾರಿ ಜಾಗದಲ್ಲಿ ವಾಸವಾಗಿದ್ದು, ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಯಿಂದಾಗಿ ಜಾಗದ ವಾರಸುತನದಿಂದ ವಂಚಿತರಾಗಿದ್ದ ಜನರ ಸಮಸ್ಯೆಯನ್ನು ಪರಿಹರಿಸಿ ಜಾಗದ ಒಡೆತನವನ್ನು ಹಸ್ತಾಂತರಿಸಿದಂತಹ ಧನ್ಯತಾ ಭಾವವಿದೆ ಎಂದು ಸಚಿವ ವಿ. ಸುನೀಲ್‌ ಕುಮಾರ್‌ ಅಭಿಪ್ರಾಯಪಟ್ಟರು. ಅವರು ಮಾ. 21 ರಂದು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ 94ಸಿ ಮತ್ತು 94ಸಿಸಿಯ 157 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

ಸರಕಾರಿ ಜಾಗದಲ್ಲಿ ಯಾರೂ ಮನೆ ಮಾಡಿಕೊಂಡಿದ್ದರೂ ಅಂತಹ ಅರ್ಹ ಕುಟುಂಬಕ್ಕೆ ಮುಂದೆಯೂ ಹಕ್ಕು ಪತ್ರವನ್ನು ನೀಡುವಂತಹ ಕಾರ್ಯ ನಿರಂತರವಾಗಿ ನಡೆಯುತ್ತದೆ. ಚುನಾವಣೆಯ ಸಂದರ್ಭ ನಾವು ಜನತೆಗೆ ನೀಡಿದಂತಹ ಭರವಸೆಯನ್ನು ಈಡೇರಿಸಿರುವುದು ಹಾಗೂ ಸರಕಾರದ ಸೌಲಭ್ಯವನ್ನು ಕಟ್ಟಕಡೆಯ ಜನತೆಗೂ ತಲುಪಿಸಿರುವುದು ಬಿಜಿಪಿ ಸರಕಾರದ ಸಾಧನೆ ಎಂದರು.

ಈ ಸಂದರ್ಭ ತಹಶೀಲ್ದಾರ್‌ ಬಿ. ಅನಂತಶಂಕರ್‌, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ, ಶಿರ್ಲಾಲು ಗ್ರಾ. ಪಂ. ಅಧ್ಯಕ್ಷ ರಮಾನಂದ ಪೂಜಾರಿ, ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌ ಮೊದಲಾದವರು ಉಪಸ್ಥಿತರಿದ್ದರು.













































error: Content is protected !!
Scroll to Top