ಲೇಟ್‌ನೈಟ್ ಲೇಡಿಸ್ ಪಾರ್ಟಿಗೆ ಬಜರಂಗ ದಳ ತಡೆ

ತಡರಾತ್ರಿ ಹೋಟೆಲ್‌ನಲ್ಲಿ ಯುವತಿಯರ ಮೋಜುಮಸ್ತಿ

ಶಿವಮೊಗ್ಗ : ನಗರದಲ್ಲಿ ಶುಕ್ರವಾರ ರಾತ್ರಿ ಹೋಟೆಲೊಂದರಲ್ಲಿ ನಡೆಯುತ್ತಿದ್ದ ‘ಲೇಟ್‌ನೈಟ್ ಲೇಡಿಸ್ ಪಾರ್ಟಿ’ಯನ್ನು ಬಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ.
ಕುವೆಂಪು ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಬಜರಂಗದಳ ಕಾರ್ಯಕರ್ತರು ಲೇಟ್ ನೈಟ್ ಪಾರ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದರು. ನಂತರ ಮಹಿಳೆಯರು, ಪುರುಷರು ಮತ್ತು ಕೆಲವು ಮಕ್ಕಳು ಸೇರಿದಂತೆ ಹಲವರು ಹೋಟೆಲ್‌ನಿಂದ ಹೊರಗೆ ಬರುತ್ತಿರುವುದು ಕಂಡುಬಂತು.
ತಡರಾತ್ರಿ ಪಾರ್ಟಿ ಆಯೋಜಿಸಲಾಗಿದೆ ಎಂದು ಬಜರಂಗದಳದ ಮುಖಂಡ ರಾಜೇಶ್ ಗೌಡ ತಿಳಿಸಿದ್ದಾರೆ.
ಮಹಿಳೆಯರ ಲೇಟ್ ನೈಟ್ ಪಾರ್ಟಿ ನಡೆಯಲಿರುವ ಬಗ್ಗೆ ವಾರದ ಹಿಂದೆಯೇ ಪೊಲೀಸರ ಗಮನಕ್ಕೆ ತಂದಿದ್ದೆವು. ಮಲೆನಾಡು ಭಾಗದಲ್ಲಿ ಇಂತಹ ಪಾರ್ಟಿಗಳನ್ನು ಆಯೋಜಿಸಬಾರದು. ಆದರೆ, ಆಕ್ಷೇಪದ ನಡುವೆಯೂ ಪಾರ್ಟಿ ಆಯೋಜಿಸಲಾಗಿತ್ತು. ನಾವು ಪೊಲೀಸರೊಂದಿಗೆ ಹೋಗಿ ಪಾರ್ಟಿಯನ್ನು ನಿಲ್ಲಿಸಿದೆವು. ಅಲ್ಲಿ ಪಬ್‌ನಂತಹ ವಾತಾವರಣ ಇತ್ತು ಎಂದು ರಾಜೇಶ್ ಗೌಡ ಹೇಳಿದ್ದಾರೆ.



















































error: Content is protected !!
Scroll to Top