ಕಾರ್ಕಳ : ಜ. 28ರ ಮಧ್ಯಾಹ್ನ ಕಾರ್ಕಳ ಗಾಂಧಿಮೈದಾನದಲ್ಲಿ ಸುಳಿಗಾಳಿ ಬೀಸಿದ್ದು, ಅಲ್ಲಿನ ಧೂಳು ಬಾನೆತ್ತರಕ್ಕೆ ಚಿಮ್ಮಿದ ಘಟನೆ ನಡಿದಿದೆ. ಸುಮಾರು 3 ನಿಮಿಷಗಳ ಕಾಲ ಸುಳಿಗಾಳಿ ಬೀಸಿದ್ದು, ಅಲ್ಲಿ ನೆರೆದಿದ್ದವರಲ್ಲಿ ಒಮ್ಮೆಗೆ ಆತಂಕವನ್ನುಂಟು ಮಾಡಿತ್ತು. ಶನಿವಾರ ಪರಪ್ಪು ಫ್ರೆಂಡ್ಸ್ ವತಿಯಿಂದ ಗಾಂಧಿಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜನೆಗೊಂಡಿತ್ತು. ನ್ಯೂ ಸ್ಟಾರ್ ಕಾರ್ಕಳ ಹಾಗೂ ಟೆಕ್ ವಿಂಗ್ ಅಜೆಕಾರು ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಂದರ್ಭ ಬಿರುಗಾಳಿ ಬೀಸಿ ಕೆಲ ಕಾಲ ಪಂದ್ಯಾಟಕ್ಕೆ ಅಡಚಣೆಯುಂಟಾಯಿತು ಎಂದು ಪ್ರತ್ಯಕ್ಷದರ್ಶಿ ಸಾಗರ್ ಮಾಹಿತಿ ನೀಡಿದರು.