ನಾರಾಯಣ ಗುರುಗಳ ಬೋಧನೆಯಲ್ಲಿ ವಿಶ್ವ ಕುಟುಂಬ ಚಿಂತನೆ – ಬಿಪಿನ್‌ಚಂದ್ರ ಪಾಲ್‌

ಕಾರ್ಕಳ : ದಾರ್ಶನಿಕ ಪುರುಷ ಬ್ರಹ್ಮಶ್ರೀ ನಾರಾಯಣ ಗುರು ತನ್ನ ಅದ್ವೈತ ಪ್ರತಿಪಾದನೆಯ ದಾರಿಯಲ್ಲಿ ಮನುಕುಲದ ಸಮಾನತೆಗಾಗಿ ಶ್ರಮಿಸಿದವರು. ಅವರ ಬೋಧನೆಯಲ್ಲಿ ಹಿಂದೆ ವಿಶ್ವ ಕುಟುಂಬದ ಚಿಂತನೆಯ ಸತ್ವ ಅಡಗಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಹೇಳಿದ್ದಾರೆ. ಅವರು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ತುಳಿತಕ್ಕೊಳಗಾದ ಮಂದಿಗೆ ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂದು ಕರೆಕೊಟ್ಟ ಅವರು ಸಮಾಜ ಎನ್ನುವುದು ಯಾರೊಬ್ಬನ ಆಸ್ತಿಯೂ ಅಲ್ಲ. ದೇವರು ಎಂಬವನು ಯಾರೋ ಒಬ್ಬನಿಗಾಗಿ ಇರುವವನಲ್ಲ ಎನ್ನುತ್ತಲೇ ಶೂದ್ರರಿಗಾಗಿ ಶೂದ್ರ ಶಿವನನ್ನು ಸೃಷ್ಟಿಸಿ ಪೂಜಿಸಿದ ಅವಧೂತ ನಾರಾಯಣ ಗುರುಗಳು ಎಂದು ಬಿಪಿನ್‌ಚಂದ್ರ ಪಾಲ್‌ ಹೇಳಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕೆಪಿಸಿಸಿ ಕಿಸಾನ್ ಘಟಕದ ಕಾರ್ಯದರ್ಶಿ ಉದಯ ಶೆಟ್ಟಿ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಸುಭೀತ್ ಕುಮಾರ್, ಬ್ಲಾಕ್ ವಕ್ತಾರ ಶುಭದಾ ರಾವ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಆರೀಫ್ ಕಲ್ಲೊಟ್ಟೆ, ಪುರಸಭಾ ಸದಸ್ಯರಾದ ಸೀತಾರಾಮ್, ಪ್ರತಿಮಾ ರಾಣೆ, ಕುಕ್ಕುಂದೂರು ಕಾಂಗ್ರೆಸ್‌ ಗ್ರಾಮಾಧ್ಯಕ್ಷ ಥೋಮಸ್ ಮಸ್ಕರೇನಸ್, ಐಟಿ ಸೆಲ್‌ ಅಧ್ಯಕ್ಷ ಸತೀಶ್, ನಗರ ಮಹಿಳಾಧ್ಯಕ್ಷೆ ಕಾಂತಿ ಶೆಟ್ಟಿ, ಮಾಜಿ ಪುರಸಭಾ ಸದಸ್ಯ ಸುನೀಲ್ ಕೋಟ್ಯಾನ್, ಅಲ್ಪ ಸಂಖ್ಯಾತ ಘಟಕದ‌ ಅಧ್ಯಕ್ಷ ಮಹಮ್ಮದ್ ಅಸ್ಲಾಂ, ಸೇವಾದಳದ ಶೇಖ್ ಅಬ್ದುಲ್ ಸಾಹೇಬ್, ಗ್ರಾ.ಪಂ. ಸದಸ್ಯ ವಿಶ್ವನಾಥ ಭಂಡಾರಿ, ಸತೀಶ್ ರಾವ್, ಸುನೀಲ್ ಭಂಡಾರಿ, ಶೋಭಾ, ಆಕಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.



































































































error: Content is protected !!
Scroll to Top