ಕಾರ್ಕಳ : ನವಜಾತ ಶಿಶುವಿನ ಮೃತದೇಹ ಕಾರ್ಕಳ ಪತ್ತೊಂಜಿಕಟ್ಟೆ ಎಂಬಲ್ಲಿಯ ತೋಡಿನಲ್ಲಿ ಜೂ. 21ರಂದು ಸಂಜೆ ಪತ್ತೆಯಾಗಿದೆ. ಈ ಕುರಿತು ಸ್ಥಳೀಯ ನಿವಾಸಿ ಕಾರ್ಕಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ಬಳಿಕ ಮಗುವಿನ ಮೃತದೇಹವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಿರುತ್ತಾರೆ.
ಸ್ಥಳೀಯ ನಿವಾಸಿಯೋರ್ವರು ಮಂಗಳವಾರ ಮನೆಯಿಂದ ನಡೆದುಕೊಂಡು ಕಾರ್ಕಳ ಬರುತ್ತಿದ್ದ ವೇಳೆ ಪಕ್ಕದ ತೋಡಿನಲ್ಲಿ ಹೆಣ್ಣುಮಗುವೊಂದು ತೇಲುತ್ತಿರುವುದು ಕಂಡು ಬಂದಿದ್ದು, ಗಾಬರಿಗೊಂಡ ಅವರು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಮಗುವನ್ನು ಎಸೆದಿರುವ ಕಾರಣ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.
ಕಾರ್ಕಳ : ನವಜಾತ ಶಿಶುವನ್ನು ತೋಡಿಗೆಸೆದ ಪಾಪಿಗಳು
Recent Comments
ಕಗ್ಗದ ಸಂದೇಶ
on